ADVERTISEMENT

Tunnel Rescue | ಈಗ ದೀಪಾವಳಿ ಆಚರಿಸುತ್ತೇವೆ: ಕಾರ್ಮಿಕನ ತಾಯಿ ಆನಂದಭಾಷ್ಪ

ಪಿಟಿಐ
Published 29 ನವೆಂಬರ್ 2023, 0:35 IST
Last Updated 29 ನವೆಂಬರ್ 2023, 0:35 IST
<div class="paragraphs"><p>ಪಿಟಿಐ ಚಿತ್ರ</p></div>

ಪಿಟಿಐ ಚಿತ್ರ

   

ಲಖನೌ: ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಲ್ಲಿ ಒಬ್ಬರಾದ 27 ವರ್ಷದ ಅಖಿಲೇಶ್‌ ಸಿಂಗ್‌ ಅವರ ಮನೆಯಲ್ಲಿ ದೀಪಾವಳಿ ಸಂಭ್ರಮ ಇರಲಿಲ್ಲ. ಆದರೆ ಮಂಗಳವಾರ ಅವರ ಮನೆಯಲ್ಲಿ ಹಬ್ಬದ ವಾತಾವರಣ ಕಂಡಿತು. 

‘ಈಗ ನಾವು ದೀಪಾವಳಿ ಆಚರಿಸುತ್ತೇವೆ. ನನ್ನ ಮಗ 17 ದಿನಗಳ ಬಳಿಕ ಸುರಂಗದಿಂದ ಸುರಕ್ಷಿತವಾಗಿ ಹೊರಗೆ ಬಂದಿದ್ದಾನೆ’ ಎಂದು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಗರ್ವಾಸ್‌ಪುರ ಗ್ರಾಮದ ನಿವಾಸಿ ಅಂಜು ದೇವಿ ಆನಂದಭಾಷ್ಪ ಸುರಿಸುತ್ತಲೇ ಹೇಳಿದರು.

ADVERTISEMENT

ಸುರಂಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದ ಕಂಪನಿಯಲ್ಲಿ ಸೂಪರ್‌ವೈಸರ್‌ ಆಗಿದ್ದ ಅಖಿಲೇಶ್‌ ಅವರ ಕುಟುಂಬದ ಸದಸ್ಯರು ಮಂಗಳವಾರ ಬೆಳಿಗ್ಗೆಯಿಂದಲೇ ಟಿ.ವಿ ಮುಂದೆ ಕುಳಿತು, ರಕ್ಷಣಾ ಕಾರ್ಯಾಚರಣೆಯ ಪ್ರಗತಿಯ ಮಾಹಿತಿ ಪಡೆಯುತ್ತಿದ್ದರು. 

‘ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಕಾರ್ಮಿಕರನ್ನು ಸುರಂಗದಿಂದ ಹೊರತರಲು ಹಗಲಿರುಳೆನ್ನದೆ ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಅಖಿಲೇಶ್‌ ಅವರ ತಂದೆ ರಮೇಶ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿದರು. ಸಂಬಂಧಿಕರು ಮತ್ತು ಗ್ರಾಮದ ಇತರ ನಿವಾಸಿಗಳು ರಮೇಶ್‌ ಅವರ ಮನೆಯ ಬಳಿ ನೆರೆದಿದ್ದರು. 

’ಅಖಿಲೇಶ್‌ ಸುರಂಗದಲ್ಲಿ ಸಿಲುಕಿದ ವಿಷಯವನ್ನು ಅವರ ಗರ್ಭಿಣಿ ಪತ್ನಿ ಮತ್ತು 80 ವರ್ಷದ ಅಜ್ಜನಿಗೆ ಆರಂಭದಲ್ಲಿ ತಿಳಿಸಿರಲಿಲ್ಲ. ಘಟನೆ ನಡೆದು ಕೆಲ ದಿನಗಳ ಬಳಿಕವಷ್ಟೇ ಅವರಿಗೆ ವಿವರ ತಿಳಿಸಿದೆವು’ ಎಂದು ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.