ADVERTISEMENT

MCD Polls: ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಏರಿದ ಎಎಪಿಯ ಮಾಜಿ ಕೌನ್ಸಿಲರ್

ಪಿಟಿಐ
Published 13 ನವೆಂಬರ್ 2022, 19:07 IST
Last Updated 13 ನವೆಂಬರ್ 2022, 19:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿರುವುದಕ್ಕೆ ಬೇಸರಗೊಂಡು ಎಎಪಿಯ ಮಾಜಿ ಕೌನ್ಸಿಲರ್‌ ಹಸೀಬ್‌ ಉಲ್ ಹಸನ್‌ ಎಂಬುವವರು ಭಾನುವಾರ ವಿದ್ಯುತ್‌ ಟವರ್‌ ಹತ್ತಿ ಪ್ರತಿಭಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಷದ ನಾಯಕರು ₹2ರಿಂದ ₹3 ಕೋಟಿಗೆ ಟಿಕೆಟ್‌ ಮಾರಾಟ ಮಾಡಿದ್ದಾರೆ ಎಂದು ಹಸೀಬ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆ ಸಂಬಂಧ ನನ್ನ ಬ್ಯಾಂಕ್‌ ಪಾಸ್‌ಬುಕ್‌ ಸೇರಿದಂತೆ ಮೂಲ ದಾಖಲೆಗಳನ್ನು ಪಕ್ಷದ ನಾಯಕರಾದ ಅತಿಶಿ, ದುರ್ಗೇಶ್‌ ಪಾಠಕ್‌ ಮತ್ತು ಸಂಜಯ್‌ ಸಿಂಗ್‌ ಅವರ ಪಡೆದುಕೊಂಡಿದ್ದು ಹಿಂದಿರುಗಿಸಿಲ್ಲ ಎಂದೂ ದೂರಿದ್ದಾರೆ.

ADVERTISEMENT

‘ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ನನಗೇನಾದರೂ ಸಂಭವಿಸಿದರೆ ಅದಕ್ಕೆ ದುರ್ಗೇಶ್‌ ಪಾಠಕ್‌ ಮತ್ತು ಅತಿಶಿ ಅವರೇ ಜವಾಬ್ದಾರರು’ ಎಂದು ಹಸೀಬ್‌ ಅವರು ವಿದ್ಯುತ್‌ ಟವರ್‌ ಮೇಲಿನಿಂದ ಲೈವ್‌ ವಿಡಿಯೊದಲ್ಲಿ ಹೇಳಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮನವೊಲಿಸಿದ ಬಳಿಕ ಅವರು ಟವರ್‌ನಿಂದ ಕೆಳಗಿಳಿದಿದ್ದಾರೆ.

‘ಮೂವರು ನಾಯಕರೂ ಭ್ರಷ್ಟರು. ನಾನು ವಿದ್ಯುತ್‌ ಟವರ್‌ಗೆ ಹತ್ತಿದ ಬಳಿಕವಷ್ಟೇ ಅವರು ನನ್ನ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ’ ಎಂದಿದ್ದಾರೆ. ಈ ಕುರಿತು ಎಎಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.