ADVERTISEMENT

ಬಿಜೆಪಿ ಸೇರಿದ ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ 

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 12:45 IST
Last Updated 28 ಅಕ್ಟೋಬರ್ 2018, 12:45 IST
ಕೃಪೆ: ಎಎನ್‌‍ಐ
ಕೃಪೆ: ಎಎನ್‌‍ಐ    

ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ಶನಿವಾರ ತಿರುವನಂತಪುರಂನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.

2003- 2009ರವರೆಗೆ ಇಸ್ರೊ ಮುಖ್ಯಸ್ಥರಾಗಿದ್ದ ನಾಯರ್, ಭಾರತದ ಮೊದಲ ಚಂದ್ರಯಾನ 1 ಯೋಜನೆಯ ರೂವಾರಿಯಾಗಿದ್ದಾರೆ. ಇನ್‌‍ಸ್ಯಾಟ್, ಪಿಎಸ್‍ಎಲ್‍ವಿ ಮತ್ತು ಜಿಎಸ್ಎಲ್‍ವಿ ಸೇರಿದಂತೆ ಯಶಸ್ವಿ 25 ಯೋಜನೆಗಳಿಗೆ ನಾಯರ್ ನೇತೃತ್ವ ವಹಿಸಿದ್ದರು.

ಬಿಜೆಪಿ ಅನುಯಾಯಿಯಾಗಿದ್ದ ನಾಯರ್ ಆಂಟ್ರಿಕ್ಸ್- ದೆವಾಸ್ ಒಪ್ಪಂದ ಪ್ರಕರಣದಲ್ಲಿ ಆರೋಪಿಯಾಗಿದ್ದರು.ಈ ಒಪ್ಪಂದದಿಂದಾಗಿ ಖಜಾನೆಗೆ 578 ಕೋಟಿ ನಷ್ಟವುಂಟಾಗಿತ್ತು, ಫೆಬ್ರುವರಿ ತಿಂಗಳಲ್ಲಿ ನಾಯರ್ ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು.

ADVERTISEMENT

ಮಾಧವನ್ ನಾಯರ್ ಜತೆ ಟ್ರಾವೆಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಜಿ, ರಾಮನ್ ನಾಯರ್, ಮಹಿಳಾ ಆಯೋಗದ ಮಾಜಿ ಸದಸ್ಯೆ ಡಾ. ಪ್ರಮೀಳಾ ದೇವಿ,ಕರ್ನಾಕುಳಂ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ದಿವಾಕರನ್ ನಾಯರ್ ಮತ್ತು ಮಲಂಕರ ಕ್ರೈಸ್ತ ದೇವಾಲಯದ ಥಾಮಸ್ ಜಾನ್ ಬಿಜೆಪಿಗೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.