ADVERTISEMENT

ಮಹಾರಾಷ್ಟ್ರ ಮಾಜಿ ಸಚಿವ ಅನಿಲ್‌ ದೇಶಮುಖ್‌ ಜೈಲಿನಿಂದ ಬಿಡುಗಡೆ

ಪಿಟಿಐ
Published 28 ಡಿಸೆಂಬರ್ 2022, 14:39 IST
Last Updated 28 ಡಿಸೆಂಬರ್ 2022, 14:39 IST
ಸಚಿವ ಅನಿಲ್‌ ದೇಶಮುಖ್‌ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಬೆಂಬಲಿಗರತ್ತ ಕೈಬೀಸಿದರು –ಪಿಟಿಐ ಚಿತ್ರ
ಸಚಿವ ಅನಿಲ್‌ ದೇಶಮುಖ್‌ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಬೆಂಬಲಿಗರತ್ತ ಕೈಬೀಸಿದರು –ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿಬಂಧಿತರಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರನ್ನು ಜಾಮೀನಿನ ಮೇಲೆಬುಧವಾರ ಸಂಜೆ ಇಲ್ಲಿನ ಆರ್ಥರ್‌ ರೋಡ್‌ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಅಜಿತ್ ಪವಾರ್‌ ಸೇರಿದಂತೆ ಎನ್‌ಸಿಪಿಯ ಹಿರಿಯ ನಾಯಕರು ಅವರನ್ನು ಜೈಲಿನ ಹೊರಗೆ ಬರಮಾಡಿಕೊಂಡರು.

ನಂತರ ಪ್ರತಿಕ್ರಿಯಿಸಿದ ದೇಶಮುಖ್‌, ‘ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ...ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು ಎನ್ನುವುದು ಹೈಕೋರ್ಟ್‌ ಗಮನಕ್ಕೆ ಬಂದಿದೆ’ ಎಂದರು.

ADVERTISEMENT

2021ರ ನವೆಂಬರ್‌ನಿಂದ ದೇಶ್‌ಮುಖ್‌ ಜೈಲಿನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.