ADVERTISEMENT

ಪುದುಚೇರಿ ಮಾಜಿ ಸಿ.ಎಂ ರಾಮಚಂದ್ರನ್‌ ನಿಧನ

ಪಿಟಿಐ
Published 8 ಡಿಸೆಂಬರ್ 2024, 20:02 IST
Last Updated 8 ಡಿಸೆಂಬರ್ 2024, 20:02 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಮಾಜಿ ಮುಖ್ಯಮಂತ್ರಿ ಎಂ.ಡಿ.ಆರ್‌. ರಾಮಚಂದ್ರನ್‌ (90) ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ರಾಮಚಂದ್ರನ್‌ ಅವರು ಡಿಎಂಕೆ ಪಕ್ಷದಲ್ಲಿದ್ದಾಗ ಎರಡು ಸಲ ಪುದುಚೇರಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 1980ರಲ್ಲಿ ಡಿಎಂಕೆ– ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದಾಗ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು. ಆ ಬಳಿಕ 1990ರಲ್ಲಿ ಮತ್ತೆ ಮುಖ್ಯಮಂತ್ರಿಯಾದರು. ಡಿಎಂಕೆ– ಜನತಾ ದಳ ಸಮ್ಮಿಶ್ರ ಸರ್ಕಾರವನ್ನು ಒಂದು ವರ್ಷದವರೆಗೆ ಮುನ್ನಡೆಸಿದ್ದರು.

2000ದಲ್ಲಿ ಡಿಎಂಕೆ ತೊರೆದು ಕಾಂಗ್ರೆಸ್‌ ಸೇರಿದ ಅವರು 2001ರಲ್ಲಿ ಎನ್‌.ರಂಗಸ್ವಾಮಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸ್ಪೀಕರ್‌ ಆದರು. ಆ ಬಳಿಕ ಪುದುಚೇರಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.