ADVERTISEMENT

ಪರಿಸರವಾದಿ, ಟಿಇಆರ್‌ಐ ಮಾಜಿ ಮುಖ್ಯಸ್ಥ ಆರ್‌.ಕೆ.ಪಚೌರಿ ನಿಧನ

ಪಿಟಿಐ
Published 14 ಫೆಬ್ರುವರಿ 2020, 2:35 IST
Last Updated 14 ಫೆಬ್ರುವರಿ 2020, 2:35 IST
ಆರ್‌.ಕೆ.ಪಚೌರಿ
ಆರ್‌.ಕೆ.ಪಚೌರಿ   

ನವದೆಹಲಿ: ಇಂಧನ ಮತ್ತು ಸಂಪನ್ಮೂಲ ಗಳ ಸಂಸ್ಥೆಯ (ಟಿಇಆರ್‌ಐ) ಮಾಜಿ ಮುಖ್ಯಸ್ಥ ಮತ್ತು ಪರಿಸರವಾದಿ ಆರ್‌.ಕೆ.ಪಚೌರಿ (79) ದೀರ್ಘ ಕಾಲದ ಅನಾರೋಗ್ಯದಿಂದಾಗಿ ಗುರುವಾರ ಇಲ್ಲಿ ನಿಧನರಾದರು.

ಹಲವು ವರ್ಷಗಳಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಎಸ್ಕಾರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಈ ಮೊದಲು ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಇದೇ ಆಸ್ಪತ್ರೆಯಲ್ಲಿ ನೆರವೇರಿಸಲಾಗಿತ್ತು.

ADVERTISEMENT

ಪರಿಸರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಪದ್ಮವಿಭೂಷಣ, ಪದ್ಮಭೂಷಣ ಪುರಸ್ಕಾರ ಪ್ರದಾನ ಮಾಡಲಾಗಿತ್ತು.

ಹವಾಮಾನ ಬದಲಾವಣೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ದೇಶಗಳ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ‘ಇಂಟರ್‌ಗವರ್ನ್‌ಮೆಂಟಲ್‌ ಪ್ಯಾನೆಲ್ ಆನ್‌ ಕ್ಲೈಮೇಟ್‌ ಚೇಂಜ್‌’ (ಐಪಿಸಿಸಿ) ಅಧ್ಯಕ್ಷರಾಗಿ ಪಚೌರಿ ಸೇವೆ ಸಲ್ಲಿಸುತ್ತಿದ್ದಾಗ 2007ರಲ್ಲಿ ಈ ಸಂಸ್ಥೆಗೆ ನೊಬೆಲ್‌ ಶಾಂತಿ ಪುರಸ್ಕಾರ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.