ADVERTISEMENT

ಕೇರಳದ ಹಲವೆಡೆ ಭಾರಿ ಮಳೆ: ನಾಲ್ವರ ಸಾವು

ಪಿಟಿಐ
Published 23 ಮೇ 2024, 2:50 IST
Last Updated 23 ಮೇ 2024, 2:50 IST
   

ತಿರುವನಂತಪುರ: ಕೇರಳದ ಹಲವೆಡೆ ಭಾರಿ ಮಳೆ ಸುರಿದಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ 4 ಮಂದಿ ಮೃತಪಟ್ಟಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‌ಡಿಎಂಎ) ಹೇಳಿದೆ.

ಅಧಿಕ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪತ್ತನಂತಿಟ್ಟ, ಆಲಪ್ಪುಳ, ಎರ್ನಾಕುಲಂ, ಕೊಟ್ಟಯಂ, ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಆದೇಶಿಸಿದೆ.

ಆಲಪ್ಪುಳ, ಕೊಟ್ಟಯಂ ಮತ್ತು ಎರ್ನಾಕುಲಂನಲ್ಲಿ ಘೋಷಿಸಲಾಗಿದ್ದ ಆರೆಂಜ್ ಅಲರ್ಟ್ ಅನ್ನು ರೆಡ್ ಅಲರ್ಟ್ ಆಗಿ ಬದಲಾಗಿದೆ. ಇಲ್ಲಿ ಅತ್ಯಧಿಕ ಮಳೆ ಸುರಿಯಲಿದೆ ಎಂದು ಐಎಂಡಿ ಹೇಳಿದೆ.

ADVERTISEMENT

ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆ.ಮೀಗೂ ಅಧಿಕ ಮಳೆಯನ್ನು ಸೂಚಿಸುತ್ತದೆ. ಆರೆಂಜ್ ಅಲರ್ಟ್ 11 ಸೆ.ಮೀನಿಂದ 20 ಸೆ.ಮೀ ಹಾಗೂ ಯೆಲ್ಲೋ ಅಲರ್ಟ್ 6 ಸೆ.ಮೀನಿಂದ 11 ಸೆ.ಮೀ ಮಳೆ ಬೀಳುವ ಸಾಧ್ಯತೆಯನ್ನು ಸೂಚಿಸುತ್ತದೆ.

ತಿರುವನಂತಪುರ, ಕೊಲ್ಲಂ, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದ್ದು, ಕಣ್ಣೂರು, ಕಾಸರಗೋಡಿನಲ್ಲಿ ಯೆಲ್ಲೋ ಅಲರ್ಟ್ ಇದೆ. .

ಕೊಚ್ಚಿಯಲ್ಲಿ ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ತ್ರಿಶೂರಿನ ತಗ್ಗುಪ್ರದೇಶಗಳೂ ಜಲಾವೃತಗೊಂಡಿವೆ.

ಇದೇವೇಳೆ, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.