
ಪಿಟಿಐ
ಸುಕ್ಮಾ (ಛತ್ತೀಸಗಢ): ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರು ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸೋಧಿ ಜೋಗಾ, ಡಾಬರ್ ಗಂಗಾ, ಸೋಧಿ ರಾಜೆ, ಮಾಧವಿ ಬುಧರಿ ಶರಣಾಗತರಾದವರು. ಸೋಧಿ ಜೋಗಾ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಿದ್ದರೆ, ಉಳಿದ ಮೂವರ ಸುಳಿವು ನೀಡಿದವರಿಗೆ ತಲಾ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಸರ್ಕಾರದ ಶರಣಾಗತಿ ಯೋಜನೆಯಡಿ ಬಸ್ತಾರ್‌ನ ದಕ್ಷಿಣ ವಿಭಾಗದ ಕಿಸ್ತಾರಾಂ ಪ್ರದೇಶ ಸಮಿತಿಯ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗತರಾಗಿದ್ದಾರೆ ಎಂದು ಬಸ್ತಾರ್ ವಲಯದ ಐಜಿ ಸುಂದರ್‌ರಾಜ್ ಪಿ. ಮಾಹಿತಿ ನೀಡಿದ್ದಾರೆ.
ಶರಣಾದ ನಕ್ಸಲರಿಗೆ ಸರ್ಕಾರದ ನೀತಿಯಡಿ ಪುನರ್‌ವಸತಿ ಸೇರಿದಂತೆ ಆರ್ಥಿಕ ನೆರವು ನೀಡಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.