ADVERTISEMENT

ಮಸೂದ್ ಅಜರ್‌ಗೆ ನಿಷೇಧ ಹೇರುವಂತೆ ಒತ್ತಾಯ: ವಿಶ್ವಸಂಸ್ಥೆಗೆ ಫ್ರಾನ್ಸ್ ಪ್ರಸ್ತಾವ

ಪುಲ್ವಾಮಾ ದಾಳಿಯ ಸಂಚುಕೋರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 20:14 IST
Last Updated 19 ಫೆಬ್ರುವರಿ 2019, 20:14 IST
ಮಸೂದ್
ಮಸೂದ್   

ನವದೆಹಲಿ: ಪುಲ್ವಾಮಾ ದಾಳಿಯ ಸಂಚುಕೋರ ಮಸೂದ್ ಅಜರ್‌ಗೆ ನಿಷೇಧ ಹೇರುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯಲ್ಲಿ ಫಾನ್ಸ್ ಕೆಲವೇ ದಿನಗಳಲ್ಲಿ ಪ್ರಸ್ತಾವ ಮಂಡಿಸಲಿದೆ.

2017ರಲ್ಲಿಯೂ ಫ್ರಾನ್ಸ್‌ ಒಮ್ಮೆ ಇಂತಹದ್ದೇ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಟ್ಟಿತ್ತು.

ಇಂಗ್ಲೆಂಡ್ ಮತ್ತು ಫ್ರಾನ್ಸ್ ಬೆಂಬಲದೊಂದಿಗೆ ಅಮೆರಿಕ ಇಟ್ಟಿದ್ದ ಮತ್ತೊಂದುಪ್ರಸ್ತಾವಕ್ಕೆ ಚೀನಾ ತಡೆಯೊಡ್ಡಿತ್ತು.

ADVERTISEMENT

ಪ್ರಧಾನಿಯವರ ರಕ್ಷಣಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಫ್ರಾನ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಫಿಲಿಪ್ ಎಟಿನ್ನೆ ಅವರು ಈ ಬಗ್ಗೆ ಮಂಗಳವಾರ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.