ಜಾವೇದ್ ಹಬೀಬ್
ಲಖನೌ: ಖ್ಯಾತ ಕೇಶವಿನ್ಯಾಸಗಾರ ಜಾವೇದ್ ಹಬೀಬ್ ಮತ್ತು ಅವರ ಪುತ್ರನ ವಿರುದ್ಧ 20ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿದ್ದು ಅವರ ಕುಟುಂಬದ ಎಲ್ಲರಿಗೂ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಜಾವೇದ್ ಹಬೀಬ್ ಮತ್ತು ಅವರ ಪುತ್ರ ಹೂಡಿಕೆ ಯೋಜನೆ ಮೂಲಕ 100ಕ್ಕೂ ಹೆಚ್ಚು ಜನರಿಗೆ ₹ 5 ರಿಂದ ₹ 7 ಕೋಟಿ ವಂಚನೆ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಂಭಾಲ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಜಾವೇದ್ ಹಬೀಬ್ ಮತ್ತು ಅವರ ಪುತ್ರನನ್ನು ಬಂಧಿಸಿಲ್ಲ. ಆದರೆ ಹಗರಣಕ್ಕೆ ಕಾರಣವಾಗಿರುವ ಕಂಪನಿಯ ಸಂಸ್ಥಾಪಕಿ ಜಾವೇದ್ ಹಬೀಬ್ ಅವರ ಪತ್ನಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನಡುವೆ ಜಾವೇದ್ ಹಬೀಬ್ ಅವರ ವಕೀಲ ಪವನ್ ಕುಮಾರ್ ಈ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಈವರೆಗೂ ಜಾವೇದ್ ಮೇಲೆ ಎಫ್ಐಆರ್ ದಾಖಲು ಆಗಿಲ್ಲ ಎಂದು ಹೇಳಿದ್ದಾರೆ.
ಇದು ಅಲ್ಲದೇ ದೆಹಲಿ ಹಾಗೂ ಮುಂಬೈನಲ್ಲಿರುವ ಅವರ ಆಸ್ತಿ ಕುರಿತು ಪೊಲೀಸ್ ತಂಡ ತನಿಖೆ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.