ADVERTISEMENT

‘ಸ್ವಾತಂತ್ರ್ಯ’ ನಮ್ಮ ಅತಿ ದೊಡ್ಡ ರಕ್ಷಣಾ ಕವಚ: ರಾಹುಲ್ ಗಾಂಧಿ

ಪಿಟಿಐ
Published 15 ಆಗಸ್ಟ್ 2024, 9:30 IST
Last Updated 15 ಆಗಸ್ಟ್ 2024, 9:30 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ನವದೆಹಲಿ: ದೇಶದ ಜನರಿಗೆ 78ನೇ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಸ್ವಾತಂತ್ರ್ಯ ನಮ್ಮ ಅತಿದೊಡ್ಡ ರಕ್ಷಣಾ ಕವಚವಾಗಿದೆ ’ ಎಂದರು.

ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಸ್ವಾತಂತ್ರ್ಯ ಎಂದರೆ ಕೇವಲ ಒಂದು ಪದವಲ್ಲ , ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಅತಿದೊಡ್ಡ ರಕ್ಷಣಾ ಕವಚ’ ಎಂದು ಹೇಳಿದರು.

ADVERTISEMENT

‘ಸ್ವಾತಂತ್ರ್ಯ ಎನ್ನುವುದು ಅಭಿವ್ಯಕ್ತಿಯ ಶಕ್ತಿಯಾಗಿದ್ದು, ಸತ್ಯವನ್ನು ಮಾತನಾಡುವ ಸಾಮರ್ಥ್ಯ ಮತ್ತು ಕನಸುಗಳನ್ನು ನನಸಾಗಿಸುವ ಭರವಸೆಯಾಗಿದೆ’ ಎಂದರು.

ಇಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಆ ಮೂಲಕ ದಶಕದ ಬಳಿಕ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಮೊದಲ ನಾಯಕ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.