ನವದೆಹಲಿ: ಕಲ್ಪಕಂನಲ್ಲಿ ದೇಶದ ಮೊದಲ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್ ಮಾದರಿ’ಗೆ (ಪಿಎಫ್‌ಬಿಆರ್) ಇಂಧನ ತುಂಬಿಸುವ ಕೆಲಸ ಆರಂಭಗೊಂಡಿದೆ.
ಭಾರತೀಯ ನಭಿಕಿಯಾ ವಿದ್ಯುತ್ ನಿಗಮ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅಭಿವೃದ್ಧಿಪಡಿಸಿದ್ದು, 500 ಮೆಗಾವ್ಯಾಟ್ ಸಾಮರ್ಥ್ಯದ ಇಂಧನ ತುಂಬಲು ಪರಮಾಣು ಇಂಧನ ನಿಯಂತ್ರಣ ಪ್ರಾಧಿಕಾರ (ಎಇಆರ್‌ಬಿ) ಅನುಮತಿ ನೀಡಿದೆ.
‘ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇಂಧನ ತುಂಬಲು ತಾಂತ್ರಿಕ ಸಮಸ್ಯೆಗಳು ತಲೆದೋರಿದ್ದವು. ಈ ಸಮಸ್ಯೆಯನ್ನು ನಿವಾರಿಸಲಾಗಿದ್ದು, ನಿಯಂತ್ರಣ ಪ್ರಾಧಿಕಾರವು ಇಂಧನ ತುಂಬಲು ಗುರುವಾರ ಅನುಮೋದನೆ ನೀಡಿದೆ. ಕೆಲಸವು ಆರಂಭಗೊಂಡಿದೆ’ ಎಂದು ಪರಮಾಣು ಇಂಧನ ಆಯೋಗದ ಮುಖ್ಯಸ್ಥ ಅಜಿತ್ ಕುಮಾರ್ ಮೊಹಾಂತಿ ತಿಳಿಸಿದ್ದಾರೆ.
ಕಳೆದ ವರ್ಷ ಇಂಧನ ತುಂಬುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಕ್ಷಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.