ADVERTISEMENT

ಮತ್ತೆ ಏರಿತು ತೈಲ ಬೆಲೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 3:41 IST
Last Updated 7 ಅಕ್ಟೋಬರ್ 2018, 3:41 IST
   

ನವದೆಹಲಿ: ನಿರಂತರವಾಗಿ ಏರುತ್ತಿರುವ ಇಂಧನ ದರಭಾನುವಾರವೂಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ 14 ಪೈಸೆಗಳಷ್ಟು ಏರಿದ್ದರೆ, ಡೀಸೆಲ್ ಬೆಲೆ 29 ಪೈಸೆ ಏರಿಕೆ ಕಂಡಿದೆ.

ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಗಳು ಕ್ರಮವಾಗಿ ₹ 81.82 ಹಾಗೂ ₹ 73.53ಕ್ಕೆ ತಲುಪಿವೆ.

ಮುಂಬೈನಲ್ಲಿ ಪೆಟ್ರೋಲ್‌ 14 ಪೈಸೆ ಮತ್ತು ಡೀಸೆಲ್ 31 ಪೈಸೆಗಳ ಏರಿಕೆಯೊಂದಿಗೆ ₹ 87.29 ಮತ್ತು ₹ 77.06 ರಷ್ಟಾಗಿವೆ.

ADVERTISEMENT

ಸೆಪ್ಟೆಂಬರ್‌ 04ರಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು₹ 2.50ರಷ್ಟು ಇಳಿಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.