ADVERTISEMENT

ಸಂಜಯ್‌ ಭಂಡಾರಿ ‘ಪಲಾಯನ ಮಾಡಿದ ಆರ್ಥಿಕ ಅಪರಾಧಿ’: ದೆಹಲಿ ಕೋರ್ಟ್‌ ಘೋಷಣೆ

ಪಿಟಿಐ
Published 5 ಜುಲೈ 2025, 13:31 IST
Last Updated 5 ಜುಲೈ 2025, 13:31 IST
ಸಂಜಯ್‌ ಭಂಡಾರಿ
ಸಂಜಯ್‌ ಭಂಡಾರಿ    

ನವದೆಹಲಿ: ಹಣ ಅಕ್ರಮ ವರ್ಗಾವಣೆ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್‌ ಭಂಡಾರಿ ಅವರನ್ನು ‘ಪಲಾಯನ ಮಾಡಿದ ಆರ್ಥಿಕ ಅಪರಾಧಿ’ ಎಂದು ದೆಹಲಿ ಕೋರ್ಟ್‌ ಶನಿವಾರ ಘೋಷಿಸಿದೆ. 

ಭಂಡಾರಿ 2016ರಿಂದ ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಭಂಡಾರಿ ಹಸ್ತಾಂತರಕ್ಕೆ ಭಾರತ ಸಲ್ಲಿಸಿದ್ದ ಮನವಿಯನ್ನು ಇತ್ತೀಚೆಗೆ ಲಂಡನ್‌ ಕೋರ್ಟ್‌ ತಿರಸ್ಕರಿಸಿತ್ತು. ಇದೀಗ ದೆಹಲಿ ವಿಶೇಷ ನ್ಯಾಯಾಲಯ, ಇ.ಡಿ ಮನವಿಯನ್ನು ಪರಿಗಣಿಸಿ 2018ರ ‘ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ’ಯಡಿ ಭಂಡಾರಿಯನ್ನು ‘ಪಲಾಯನ ಮಾಡಿದ ಆರ್ಥಿಕ ಅಪರಾಧಿ’ಯಾಗಿ ಘೋಷಿಸಿದೆ. 

ಭಂಡಾರಿ ಮತ್ತು ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ 2017ರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ. 2015ರ ಕಪ್ಪುಹಣ ನಿಗ್ರಹ ಕಾನೂನಿನಡಿ ಆದಾಯ ತೆರಿಗೆ ಇಲಾಖೆಯೂ ಭಂಡಾರಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.