ADVERTISEMENT

ಮಾಲಿನ್ಯದಿಂದಾಗಿ ದೆಹಲಿಗೆ ಭೇಟಿ ನೀಡಲು ಇಚ್ಚಿಸಲ್ಲ: ನಿತಿನ್‌ ಗಡ್ಕರಿ

ಪಿಟಿಐ
Published 3 ಡಿಸೆಂಬರ್ 2024, 13:32 IST
Last Updated 3 ಡಿಸೆಂಬರ್ 2024, 13:32 IST
<div class="paragraphs"><p>ನಿತಿನ್‌ ಗಡ್ಕರಿ </p></div>

ನಿತಿನ್‌ ಗಡ್ಕರಿ

   

ಪಿಟಿಐ

ನವದೆಹಲಿ: ‘ಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲು ನಾನು ಇಚ್ಚಿಸುವುದಿಲ್ಲ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ADVERTISEMENT

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಇಲ್ಲಿ ವಾಸಿಸಲು ನನಗೆ ಕಿಂಚಿತ್ತು ಇಷ್ಟವಿಲ್ಲ. ಇಲ್ಲಿನ ಮಾಲಿನ್ಯದಿಂದಾಗಿ ನಾನು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತೇನೆ’ ಎಂದು ಹೇಳಿದರು.

‘ಪ್ರತಿ ಬಾರಿ ದೆಹಲಿಗೆ ಭೇಟಿ ನೀಡಿದಾಗ ಇಲ್ಲಿ ತಂಗಬೇಕೋ ಅಥವಾ ಹೊರಡಬೇಕೊ ಎಂಬ ಬಗ್ಗೆ ಯೋಚಿಸುತ್ತೇನೆ’ ಎಂದು ಹೇಳಿದರು.

ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮಾಲಿನ್ಯವನ್ನು ತಹಬದಿಗೆ ತರಬಹುದು ಎಂದೂ ಸಲಹೆ ನೀಡಿದರು.

'ಭಾರತವು ₹22 ಲಕ್ಷ ಕೋಟಿ ಮೌಲ್ಯದ ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತಿದೆ’ ಎಂದು ಇದೇ ವೇಳೆ ತಿಳಿಸಿದರು.

ಮಂಗಳವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತುಸು ಸುಧಾರಿಸಿದ್ದು, ಎಕ್ಯೂಐ 274ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.