ADVERTISEMENT

ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ:ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಪಿಟಿಐ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST
ಜಿತೇಂದ್ರ ಸಿಂಗ್‌
ಜಿತೇಂದ್ರ ಸಿಂಗ್‌   

ನವದೆಹಲಿ : ಇಸ್ರೊ ಹಮ್ಮಿಕೊಂಡಿರುವ ‘ಗಗನಯಾನ ಯೋಜನೆ’ಗೆ ಆಯ್ಕೆಯಾಗಿರುವ ನಾಲ್ವರು ಗಗನಯಾನಿಗಳು ರಷ್ಯಾದಲ್ಲಿ 11 ತಿಂಗಳ ತರಬೇತಿ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

‌‌‘ಜನವರಿ ಮೂರನೇ ವಾರದಿಂದ ತರಬೇತಿ ಆರಂಭವಾಗಲಿದೆ. ನಂತರ ಭಾರತದಲ್ಲೂ ಗಗನಯಾನಿಗಳ ತಂಡಕ್ಕೆ ನಿರ್ದಿಷ್ಟ ತರಬೇತಿ ನೀಡಲಾಗುತ್ತದೆ’ ಎಂದು ಅಣುಶಕ್ತಿ ಮತ್ತು ಬಾಹ್ಯಾಕಾಶ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.‌

2022ರಗಗನಯಾನ ಯೋಜನೆಯು ಇಸ್ರೊದ ಮಾನವಸಹಿತ ಬಾಹ್ಯಾಕಾಶ ಯೋಜನೆಯಾಗಿದೆ. ಜಿಎಸ್‌ಎಲ್‌ವಿ ಮಾರ್ಕ್‌–3 ಉಡಾವಣಾ ವಾಹನವು ಯಾನಿಗಳನ್ನು ಹೊತ್ತೊಯ್ಯಲಿದೆ. ಯೋಜನೆಗೆ ₹ 10,000 ಕೋಟಿ ಖರ್ಚಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.