ADVERTISEMENT

ಪತ್ನಿಯನ್ನೇ ಜೂಜಿಗಿಟ್ಟ ಪತಿ: ಸ್ನೇಹಿತರಿಂದ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:33 IST
Last Updated 2 ಆಗಸ್ಟ್ 2019, 18:33 IST
   

ಜೌನ್‌ಪುರ, ಉತ್ತರ ಪ್ರದೇಶ: ಜೂಜಾಟ ಹಾಗೂ ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನೇ ಜೂಜಿಗಿಟ್ಟಿದ್ದಾನೆ. ಸೋತ ಬಳಿಕ ಆತನ ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ ಕಾರಣ ಸಂತ್ರಸ್ತ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಂತ್ರಸ್ತೆಯ ಪತಿಯ ಸ್ನೇಹಿತರಾದ ಅರುಣ್‌ ಮತ್ತು ಅನಿಲ್‌ ಎಂಬುವರು ಮದ್ಯಪಾನ ಮಾಡಲು ಮತ್ತು ಜೂಜಾಟಕ್ಕಾಗಿ ಪದೇ ಪದೇ ಇವರ ಮನೆಗೆ ಬರುತ್ತಿದ್ದರು. ಜೂಜಾಟದಲ್ಲಿ ಪತಿ ಸೋತಾಗ ಈ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿರು ವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಅತ್ಯಾಚಾರದ ಬಳಿಕ ಸಂತ್ರಸ್ತೆ ಸಂಬಂಧಿಕರ ಮನೆಗೆ ತೆರೆಳಿದ್ದರು. ಅಲ್ಲಿಗೆ ಹೋದ ಪತಿ ಕ್ಷಮೆ ಕೋರಿ ತನ್ನ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿದ್ದಾನೆ. ಮಾರ್ಗ ಮಧ್ಯೆ ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರ ನಡೆಸಲು ಸ್ನೇಹಿತರಿಗೆ ಅನುವು ಮಾಡಿಕೊಟ್ಟಿದ್ದಾನೆ ಎಂದೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.