ADVERTISEMENT

ಮೇ 3ರಿಂದ ಗಂಗೋತ್ರಿ ದರ್ಶನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 20:15 IST
Last Updated 3 ಏಪ್ರಿಲ್ 2022, 20:15 IST
ಗಂಗೋತ್ರಿ ಧಾಮ
ಗಂಗೋತ್ರಿ ಧಾಮ   

ಉತ್ತರಕಾಶಿ, ಉತ್ತರಾಖಂಡ: ಹಿಮಾಲಯದ ತಟದಲ್ಲಿರುವ ಪ್ರಸಿದ್ಧ ಗಂಗೋತ್ರಿ ದೇವಾಲಯವನ್ನು ಅಕ್ಷಯ ತೃತೀಯದಂದು, ಅಂದರೆ ಮೇ 3 ರಂದು ತೆರೆಯಲಾಗುವುದು ಎಂದು ದೇವಾಲಯ ಸಮಿತಿ ಭಾನುವಾರ ತಿಳಿಸಿದೆ.

ಬೆಳಿಗ್ಗೆ 11.15 ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಗುವುದು. ಮುಂದಿನ ಆರು ತಿಂಗಳಗಳವರೆಗೆ ದೇವಾಲಯದಲ್ಲಿ ದರ್ಶನಕ್ಕೆ ಭಕ್ತರಿಗೆ ಅವಕಾಶವಿರಲಿದೆ ಎಂದು ಗಂಗೋತ್ರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸುರೇಶ್ ಸೆಮ್ವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT