ADVERTISEMENT

ಕಾಂಬೋಡಿಯಾದಲ್ಲಿ ಹರಿಯಾಣದ ಕುಖ್ಯಾತ ಗ್ಯಾಂಗ್‌ಸ್ಟರ್‌ ಮಣಿಪಾಲ್‌ ಬದ್ಲಿ ಬಂಧನ

ಪಿಟಿಐ
Published 3 ಸೆಪ್ಟೆಂಬರ್ 2025, 7:31 IST
Last Updated 3 ಸೆಪ್ಟೆಂಬರ್ 2025, 7:31 IST
   

ಗುರುಗ್ರಾಮ: ಹರಿಯಾಣದ ಕುಖ್ಯಾತ ಗ್ಯಾಂಗ್‌ಸ್ಟರ್‌ ಮಣಿಪಾಲ್‌ ಬದ್ಲಿ ಅವರನ್ನು ಕಾಂಬೋಡಿಯಾದಲ್ಲಿ ಎಸ್‌ಟಿಎಫ್‌ ಬಂಧಿಸಿದೆ.

ಗುಪ್ತಚರ ಅಧಿಕಾರಿಗಳು ಹಾಗೂ ಎಸ್‌ಟಿಎಫ್‌ ಜಂಟಿ ರಹಸ್ಯ ಕಾರ್ಯಾಚರಣೆ ಮೂಲಕ ಹತ್ತು ದಿನಗಳ ಹಿಂದೆಯೇ ಮಣಿಪಾಲ್‌ ಬದ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಕಾಂಬೋಡಿಯಾದಿಂದ ಭಾರತಕ್ಕೆ ಮರಳಿ ಕರೆದುಕೊಂಡು ಬರಲಾಗಿದೆ ಎಂದು ಎಸ್‌ಟಿಎಫ್‌ ತಿಳಿಸಿದೆ.

ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಣಿಪಾಲ್‌ ಬದ್ಲಿ, 2018ರಲ್ಲಿ ಪೆರೋಲ್‌ ಮೇಲೆ ಕಾರಾಗೃಹದಿಂದ ಬಿಡುಗಡೆಗೊಂಡಿದ್ದರು. ಆ ನಂತರ ವಿದೇಶಕ್ಕೆ ಪರಾರಿಯಾಗಿದ್ದರು ಎಸ್‌ಟಿಎಫ್‌ ಎಂದು ಹೇಳಿದೆ.

ADVERTISEMENT

ವಿದೇಶದಿಂದಲೇ ತನ್ನ ಗ್ಯಾಂಗ್‌ ಅನ್ನು ಮುನ್ನಡೆಸುತ್ತಿದ್ದ ಮಣಿಪಾಲ್‌ ಬದ್ಲಿ ಅವರನ್ನು ಹಿಡಿದುಕೊಡಲು ₹ 7 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು.

ಮಣಿಪಾಲ್‌ ಬದ್ಲಿ ಬಂಧನದ ಕುರಿತು ಬುಧವಾರ ಮಧ್ಯಾಹ್ನದ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.