ADVERTISEMENT

ಗಯಾ ವಿಮಾನ ನಿಲ್ದಾಣಕ್ಕೇಕೆ GAY ಸಂಕೇತ: ರಾಜ್ಯಸಭೆಯಲ್ಲಿ BJP ಸದಸ್ಯರ ಕಳವಳ

GAY ಸಂಕೇತದ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ

ಪಿಟಿಐ
Published 5 ಆಗಸ್ಟ್ 2025, 12:31 IST
Last Updated 5 ಆಗಸ್ಟ್ 2025, 12:31 IST
<div class="paragraphs"><p>ವಿಮಾನ ನಿಲ್ದಾಣ</p></div>

ವಿಮಾನ ನಿಲ್ದಾಣ

   

ಪಿಟಿಐ ಚಿತ್ರ

ಬಿಹಾರ; ಗಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'GAY' ಅನ್ನು IATA ಗುರುತಿನ ಸಂಕೇತವಾಗಿ ಬಳಸುವುದಕ್ಕೆ

ADVERTISEMENT

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಸದಸ್ಯರ ಕವಳಕ್ಕೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೋಹೋಲ್, ಒಂದು ಬಾರಿ ನೀಯೋಜಿಸಿದ ಮೂರು ಅಕ್ಷರಗಳ ವಿಮಾನ ನಿಲ್ದಾಣ ಸಂಕೇತವನ್ನು ಬದಲಾಯಿಸಲು ಸಾಧ್ಯವಿಲ್ಲ ಒಂದು ವೇಳೆ ಬದಲಾವಣೆ ಅನಿವಾರ್ಯವಾಗಿದ್ದರೆ ಅದು ಅಸಾಧಾರಣ ಮಾತ್ರ.

ಮೂರು ಅಕ್ಷರಗಳ ವಿಮಾನ ನಿಲ್ದಾಣ ಸಂಕೇತಗಳನ್ನು ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ (IATA) ಪ್ರಯಾಣ-ಸಂಬಂಧಿತ ವಿವಿಧ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಗುರುತಿಸಲು ಅನುಕೂಲವಾಗುವಂತೆ ನೀಡಿರುತ್ತದೆ.

ಹಾಲಿ ಇರುವ ಸಂಕೇತವನ್ನು ಬದಲಿಸುವಂತೆ ಈ ಹಿಂದೆ ಏರ್‌ ಇಂಡಿಯಾ ಮನವಿ ಸಲ್ಲಿಸಿತ್ತು.

ಆದಾಗ್ಯೂ, IATA ನಿರ್ಣಯ 763 ರ ನಿಬಂಧನೆಗಳ ಅಡಿಯಲ್ಲಿ, ನಿಯೋಜಿಸಲಾದ ಮೂರು ಅಕ್ಷರಗಳ ಸಂಕೇತಗಳನ್ನು ಶಾಶ್ವತವೆಂದು ಪರಿಗಣಿಸಲಾಗುತ್ತದೆ. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಬದಲಾಯಿಸಲಾಗುತ್ತದೆ, ಸಾಮಾನ್ಯವಾಗಿ ವಾಯು ಸುರಕ್ಷತೆಯ ಕಾಳಜಿಗಳನ್ನು ಒಳಗೊಂಡಿರುತ್ತದೆ" ಎಂದು IATA ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.