ADVERTISEMENT

ರಾಹುಲ್ ಎದೆಗೆ ಗುಂಡಿಕ್ಕಲಾಗುತ್ತದೆ ಎಂದ ಬಿಜೆಪಿ ನಾಯಕನ ವಿರುದ್ಧ ಗೆಹಲೋತ್ ಕಿಡಿ

ಪಿಟಿಐ
Published 29 ಸೆಪ್ಟೆಂಬರ್ 2025, 12:07 IST
Last Updated 29 ಸೆಪ್ಟೆಂಬರ್ 2025, 12:07 IST
<div class="paragraphs"><p> ಅಶೋಕ್ ಗೆಹಲೋತ್</p></div>

ಅಶೋಕ್ ಗೆಹಲೋತ್

   

ಜೈಪುರ: ರಾಹುಲ್ ಗಾಂಧಿಗೆ ಗುಂಡಿಕ್ಕಲಾಗುವುದು ಎಂಬ ಬಿಜೆಪಿ ವಕ್ತಾರರೊಬ್ಬರ ಬೆದರಿಕೆಯನ್ನು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸೋಮವಾರ ಖಂಡಿಸಿದ್ದಾರೆ. ಇದು ಆಡಳಿತ ಪಕ್ಷದ ಮನಸ್ಥಿತಿಯ ಅಪಾಯಕಾರಿ ಪ್ರತಿಬಿಂಬವಾಗಿದೆ ಎಂದಿದ್ದಾರೆ.

‘ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಗುಂಡಿಕ್ಕಿ ಕೊಂದಿರುವುದನ್ನು ದೇಶ ಕಂಡಿದೆ. ಅವರು ರಾಷ್ಟ್ರವನ್ನು ಒಗ್ಗಟ್ಟಿನಲ್ಲಿಡಲು ಬದ್ಧರಾಗಿದ್ದರು. ಈಗ ಬಿಜೆಪಿ ವಕ್ತಾರರು ರಾಹುಲ್ ಗಾಂಧಿಯವರ ಎದೆಗೆ ಗುಂಡು ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ’ಎಂದು ಗೆಹಲೋತ್ ವಿಡಿಯೊ ಸಂದೇಶದಲ್ಲಿ ಖಂಡಿಸಿದ್ದಾರೆ.

ADVERTISEMENT

ಈ ವಿಷಯದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮೌನದ ಬಗ್ಗೆ ಗೆಹಲೋತ್ ಕಳವಳ ವ್ಯಕ್ತಪಡಿಸಿದ್ದಾರೆ.

‘ಟಿವಿ ಕಾರ್ಯಕ್ರಮವೊಂದರ ಚರ್ಚೆಯಲ್ಲಿ ವಕ್ತಾರರು ಬಹಿರಂಗವಾಗಿ ಇಂತಹ ಹೇಳಿಕೆ ನೀಡಿದ್ದು, ಪಕ್ಷದ ಅಧ್ಯಕ್ಷರು ಈ ಬಗ್ಗೆ ಪ್ರತಿಕ್ರಿಯಿಸದಿದ್ದರೆ, ಅದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ದೇಶವು ಈ ಬಗ್ಗೆ ಚಿಂತಿಸಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.

ಕೇರಳದ ಎಬಿವಿಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಪ್ರಿಂಟು ಮಹಾದೇವ್ ಅವರು, ಮಲಯಾಳಂ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿ ಅವರ ಎದೆಗೆ ಗುಂಡಿಕ್ಕಲಾಗುತ್ತದೆ ಎಂದಿದ್ದರು.

ಇದೇವೇಳೆ, ರಾಹುಲ್ ಗಾಂಧಿಯವರ ಸಾರ್ವಜನಿಕ ಪ್ರವಾಸದ ಕುರಿತಾದ ಮಾಹಿತಿಯನ್ನು ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆಯೂ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ದೇಶದಾದ್ಯಂತ ಕೈಗೊಳ್ಳುವ ಪ್ರವಾಸ, ವಿದೇಶಿ ಭೇಟಿಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಇದು ಭದ್ರತಾಲೋಪವಲ್ಲವೇ? ಎಂದೂ ಪ್ರಶ್ನಿಸಿದ್ದಾರೆ.

ಈ ಸಂಬಂಧ ಬಿಜೆಪಿ ದೇಶದ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.