ADVERTISEMENT

ಮಣಿಪುರ ಬಂದ್‌: ವ್ಯಾಪಾರ -ವಹಿವಾಟು ಸ್ಥಗಿತ, ಜನಜೀವನ ಅಸ್ತವ್ಯಸ್ತ

ಪಿಟಿಐ
Published 15 ಅಕ್ಟೋಬರ್ 2023, 12:34 IST
Last Updated 15 ಅಕ್ಟೋಬರ್ 2023, 12:34 IST
<div class="paragraphs"><p>ಮಣಿಪುರದಲ್ಲಿ ಪ್ರತಿಭಟನೆ ನಡೆಸಲಾಯಿತು</p></div>

ಮಣಿಪುರದಲ್ಲಿ ಪ್ರತಿಭಟನೆ ನಡೆಸಲಾಯಿತು

   

ಇಂಫಾಲ್: ಮಣಿಪುರವನ್ನು ಭಾರತದೊಂದಿಗೆ ವಿಲೀನಗೊಳಿಸಿದ್ದರ ವಿರುದ್ಧ ಹಲವು ಉಗ್ರ ಸಂಘಟನೆಗಳು ಭಾನುವಾರ ಬಂದ್‌ಗೆ ಕರೆ ನೀಡಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ವಾಣಿಜ್ಯ ಮಳಿಗೆಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಕೆಲ ಖಾಸಗಿ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಂತರ ಜಿಲ್ಲಾ ಸಾರಿಗೆ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಯುನೈಟೆಡ್‌ ನ್ಯಾಷನಲ್ ಲಿಬರೇಷನ್‌ ಫ್ರಂಟ್‌ (ಯುಎನ್‌ಎಲ್‌ಎಫ್‌) ಸೇರಿದಂತೆ ಕನಿಷ್ಠ ಐದು ನಿಷೇಧಿತ ಸಂಘಟನೆಗಳ ಸಮನ್ವಯ ಸಮಿತಿಯು ಬಂದ್‌ಗೆ ಕರೆ ನೀಡಿತ್ತು.

ಸಮಿತಿಯು, ‘ಜನರು ಭಾನುವಾರ ಯಾವುದೇ ಸಂಭ್ರಮಾಚರಣೆ ನಡೆಸಬಾರದು’ ಎಂದು ಮನವಿ ಮಾಡಿ ಹೇಳಿಕೆ ಬಿಡುಗಡೆ ಮಾಡಿದೆ.

ಮಹಾರಾಜ ಬುಧಚಂದ್ರ ಅವರು 1949 ಸೆಪ್ಟೆಂಬರ್‌ 21ರಂದು ಮಣಿಪುರವನ್ನು ಭಾರತದೊಂದಿಗೆ ವಿಲೀನ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದೇ ವರ್ಷ ಅಕ್ಟೋಬರ್‌ 15ರಿಂದ ಒಪ್ಪಂದ ಅನುಷ್ಠಾನಗೊಂಡಿತ್ತು. ಉಗ್ರ ಸಂಘಟನೆಗಳು ಈ ದಿನವನ್ನು ‘ಕರಾಳ ದಿನ’ವಾಗಿ ಆಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.