ADVERTISEMENT

ಕಾಂಗ್ರೆಸ್‌ ಪಂಚತಾರಾ ಸಂಸ್ಕೃತಿ ತ್ಯಜಿಸಬೇಕು: ಗುಲಾಂ ನಬಿ ಆಜಾದ್

ಪಿಟಿಐ
Published 22 ನವೆಂಬರ್ 2020, 18:24 IST
Last Updated 22 ನವೆಂಬರ್ 2020, 18:24 IST
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್   

ನವದೆಹಲಿ: ‘ಜನರು ಮತ್ತು ಕಾಂಗ್ರೆಸ್ ನಾಯಕರ ನಡುವೆ ದೊಡ್ಡಮಟ್ಟದಲ್ಲಿ ಸಂಪರ್ಕ ಕಡಿತಗೊಂಡಿದ್ದು, ಕಾಂಗ್ರೆಸ್ ಮುಖಂಡರು ‘ಪಂಚತಾರಾ ಸಂಸ್ಕೃತಿ’ಯನ್ನು ತ್ಯಜಿಸಬೇಕು’ ಎಂದು ಭಾನುವಾರ ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 70 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿದ್ದು, ಪಕ್ಷದ ಸೋಲಿನ ನಂತರ ಆಜಾದ್ ಅವರು ಈ ಹೇಳಿಕೆ ನೀಡಿದ್ದಾರೆ.

‘ಬ್ಲಾಕ್, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಚುನಾವಣೆ ನಡೆಸುವ ಅಗತ್ಯವಿದೆ. ಕನಿಷ್ಠ ಚುನಾವಣೆ ಸಂದರ್ಭದಲ್ಲಾದರೂ ಕಾಂಗ್ರೆಸ್‌ನ ಎಲ್ಲಾ ಹಂತದ ನಾಯಕರೂ ತಮ್ಮ ಪಂಚತಾರಾ ಸಂಸ್ಕೃತಿಯನ್ನು ಕೈಬಿಟ್ಟು ಕ್ಷೇತ್ರದಲ್ಲಿ ಉಳಿಯಬೇಕು. ಜನರು ಮತ್ತು ಕಾಂಗ್ರೆಸ್ ನಾಯಕರ ನಡುವೆ ದೊಡ್ಡಮಟ್ಟದಲ್ಲಿಯೇ ಸಂಪರ್ಕ ಕಡಿತಗೊಂಡಿದೆ. ಪಕ್ಷವು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲ ಉಳಿದ ಸಮಯದಲ್ಲೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಬೇಕು’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಟ್ಟಿದ್ದಾರೆ.

ADVERTISEMENT

‘ಪ್ರತಿನಾಯಕನಿಗೆ ಪ್ರತಿವಿಧಾನಸಭಾ ಕ್ಷೇತ್ರದ ಬಗ್ಗೆ ಜ್ಞಾನವಿರಬೇಕು. ಕೇವಲ ದೆಹಲಿಯಿಂದ ಹೋಗಿ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದು ಎರಡು ಮೂರು ದಿನಗಳ ನಂತರ ದೆಹಲಿಗೆ ಮರಳುವುದು ಹಣ ವ್ಯರ್ಥವಲ್ಲದೆ ಮತ್ತೇನಲ್ಲ. ನಾವು ಸುಧಾರಣಾವಾದಿಗಳು ಬಂಡುಕೋರರಲ್ಲ’ಎಂದೂ ಆಜಾದ್ ಸ್ಪಷ್ಟಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.