ADVERTISEMENT

ಅಸ್ಸಾಂ ಪ್ರಾಣಿಸಂಗ್ರಹಾಲಯಕ್ಕೆ ನೂತನ ಅತಿಥಿ !

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 1:14 IST
Last Updated 1 ಡಿಸೆಂಬರ್ 2019, 1:14 IST
   

ಗುವಾಹಟಿ: ಅಸ್ಸಾಂನ ಪ್ರಾಣಿಸಂಗ್ರಹಾಲಯ ಹಾಗೂ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯೊಬ್ಬರು ಆಗಮಿಸಿದ್ದಾರೆ.
ಅತಿಥಿ ಬೇರಾರೂ ಅಲ್ಲ, ಮುದ್ದುಮುದ್ದಾಗಿರುವ ಜಿರಾಫೆ, ಅಸ್ಸಾಂ ಪ್ರಾಣಿ ಸಂಗ್ರಹಾಲಯದಲ್ಲಿ ಜಿರಾಫೆ ಇರಲಿಲ್ಲವಂತೆ. ಎಂಟು ವರ್ಷಗಳ ಬಳಿಕ ಇಲ್ಲಿಗೆ ಜಿರಾಫೆಯೊಂದನ್ನು ಅಧಿಕಾರಿಗಳು ತಂದಿದ್ದಾರೆ. ಪಟ್ನಾ ಜೈವಿಕ ಉದ್ಯಾನವನದಿಂದ ಇದನ್ನು ತರಲಾಗಿದ್ದು, ಅಲ್ಲಿನ ಅರಣ್ಯ ಇಲಾಖೆಗಳ ನಡುವೆ ನಡೆದಿರುವ ಒಪ್ಪಂದದಂತೆ ಈ ಪ್ರಾಣಿಯನ್ನು ತರಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ತೇಜಸ್ ಮರಿಸ್ವಾಮಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದು ಹೆಣ್ಣು ಜಿರಾಫೆಯಾಗಿದ್ದು, ಇನ್ನು ಒಂದು ವಾರದ ಒಳಗೆ ಗಂಡು ಜಿರಾಫೆ ಬರಲಿದೆ ಎಂದಿದ್ದಾರೆ. ಅಲ್ಲಿಗೆ ಅಸ್ಸಾಂ ಪ್ರಾಣಿಸಂಗ್ರಹಾಲಯದಲ್ಲಿ ಜಿರಾಫೆಗಳ ಆಟೋಟಗಳನ್ನು ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.