ADVERTISEMENT

ಕೋವಿಡ್‌ 3ನೇ ಅಲೆ; ಜನರಿಗೆ ನೆರವಾಗಲು 2,571 ಕಾರ್ಯಕರ್ತರಿಗೆ ತರಬೇತಿ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2021, 5:31 IST
Last Updated 7 ಸೆಪ್ಟೆಂಬರ್ 2021, 5:31 IST
ಬಿಜೆಪಿ (ಪ್ರಾತಿನಿಧಿಕ ಚಿತ್ರ)
ಬಿಜೆಪಿ (ಪ್ರಾತಿನಿಧಿಕ ಚಿತ್ರ)   

ಪಣಜಿ: ಸಂಭಾವ್ಯ ಕೋವಿಡ್‌-19 ಮೂರನೇ ಅಲೆ ಸಂದರ್ಭದಲ್ಲಿ ಜನರಿಗೆ ನೆರವು ನೀಡುವುದಕ್ಕಾಗಿ38 ವಿಧಾನಸಭೆ ಕ್ಷೇತ್ರಗಳ 2,571 ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಗೋವಾ ಬಿಜೆಪಿ ತಿಳಿಸಿದೆ.

ʼ40ವಿಧಾನಸಭೆ ಕ್ಷೇತ್ರಗಳ‌ ಪೈಕಿ38 ಕ್ಷೇತ್ರಗಳ‌ 3,243 ಬೂತ್‌ ಮಟ್ಟದಕಾರ್ಯಕರ್ತರಲ್ಲಿ2,571 ಮಂದಿಗೆ (ಶೇ86)ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರಅಭಿಯಾನದ ಭಾಗವಾಗಿ ಗೋವಾ ಬಿಜೆಪಿ ವೈದ್ಯಕೀಯ ಘಟಕವು ತರಬೇತಿ ನೀಡಿದೆ. ಕೋವಿಡ್‌ ಮೂರನೇ ಅಲೆ ನಿಯಂತ್ರಣದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ150 ತರಬೇತುದಾರರಿಗೂ ತರಬೇತಿ ನೀಡಲಾಗಿದೆʼ ಎಂದು ಬಿಜೆಪಿ ವೈದ್ಯಕೀಯ ವಿಭಾಗದ ಉಸ್ತುವಾರಿ ಡಾ. ಶೇಖರ್‌ ಸಾಲ್ಕರ್‌ ತಿಳಿಸಿದ್ದಾರೆ.

ಗಣೇಶ ಚತುರ್ಥಿಯ ಬಳಿಕ ಉಳಿದ ಎರಡು ಕ್ಷೇತ್ರಗಳಲ್ಲೂ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ʼಕೊರಾನಾವೈರಸ್‌ ಏನು,ಕೋವಿಡ್‌ನ ಸ್ವಭಾವ ಎಂಥದು,ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ,ಸರಿಯಾದ ಆಹಾರ ಕ್ರಮ-ಯೋಗ, ಮೂರನೇ ಅಲೆ ನಿಯಂತ್ರಣ ಸೇರಿದಂತೆ ತರಬೇತಿಯು ಎಲ್ಲ ಆಯಾಮಗಳನ್ನೂ ಒಳಗೊಂಡಿದೆ. ಮಾಸ್ಕ್‌ ಧರಿಸುವುದು, ಬಳಸಿದ ಮಾಸ್ಕ್‌ ವಿಲೇವಾರಿ ಮಾಡುವುದು ಹೇಗೆ, ಪಲ್ಸ್‌ ಆಕ್ಸಿಮೀಟರ್ ಮತ್ತು ಥರ್ಮಲ್‌ ಗನ್‌ ಬಳಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಗಿದೆʼ ಎಂದು ಸಾಲ್ಕರ್‌ ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಪಣಜಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರ ಅಭಿಯಾನಕ್ಕೆ ಆಗಸ್ಟ್‌8ರಂದುಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.