ADVERTISEMENT

ನೆರೆ ರಾಜ್ಯಗಳ ಅವಲಂಬನೆ: ಸಾವಂತ್‌ ಕಳವಳ

ಪಿಟಿಐ
Published 5 ಅಕ್ಟೋಬರ್ 2019, 19:41 IST
Last Updated 5 ಅಕ್ಟೋಬರ್ 2019, 19:41 IST

ಪಣಜಿ: ಅಗತ್ಯ ಸೌಲಭ್ಯಗಳಿಗಾಗಿ ರಾಜ್ಯವು ನೆರೆ ರಾಜ್ಯಗಳನ್ನು ಅವಲಂಬಿಸಿರುವುದಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರಾಜ್ಯಕ್ಕೆ ಪ್ರತಿ ದಿನ 4.5 ಲಕ್ಷ ಲೀಟರ್‌ನಷ್ಟು ಹಾಲಿನ ಅಗತ್ಯವಿದೆ. ಆದರೆ ಕೇವಲ ಒಂದು ಲಕ್ಷ ಲೀಟರ್‌ನಷ್ಟು ಮಾತ್ರ ನಮ್ಮಲ್ಲಿ ಉತ್ಪಾದನೆಯಾಗುತ್ತಿದೆ. ಉಳಿದ ಹಾಲನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ತರಿಸಿಕೊಳ್ಳುತ್ತಿದ್ದೇವೆ‘ ಎಂದಿದ್ದಾರೆ.

‘ಹಾಲನ್ನು ತರಿಸಿಕೊಳ್ಳುವುದರಿಂದ ಪ್ರತಿ ದಿನ ₹4.5 ಕೋಟಿಗಳಷ್ಟು ನಮ್ಮ ಹಣ ನೆರೆರಾಜ್ಯಗಳ ಪಾಲಾಗುತ್ತಿದೆ‘ ಎಂದೂ ಹೇಳಿದ್ದಾರೆ.

ADVERTISEMENT

‘ಇಲ್ಲಿನ ಜನರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ಹಣ ನೆರೆರಾಜ್ಯಗಳ ಪಾಲಾಗದಂತೆ ನೋಡಿಕೊಳ್ಳಬೇಕು‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.