ADVERTISEMENT

ಗೋವಾ: ಟಿಎಂಸಿ ಜತೆ ಮಹಾರಾಷ್ಟ್ರವಾದಿ ಗೋಮಾಂತಕ್‌ ಪಕ್ಷ ಮೈತ್ರಿ

ಗೋವಾ ವಿಧಾನಸಭೆ ಚುನಾವಣೆ

ಪಿಟಿಐ
Published 6 ಡಿಸೆಂಬರ್ 2021, 11:20 IST
Last Updated 6 ಡಿಸೆಂಬರ್ 2021, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ, ಗೋವಾ (ಪಿಟಿಐ): ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದೊಡನೆ ಮೈತ್ರಿ ಮಾಡಿಕೊಂಡು ಮುಂಬರುವ ಗೋವಾ ವಿಧಾನಸಭೆ ಚುನಾವಣೆ ಎದುರಿಸುವುದಾಗಿ ಮಹಾರಾಷ್ಟ್ರವಾದಿ ಗೋಮಾಂತಕ್‌ ಪಕ್ಷ (ಎಂಜಿ‍ಪಿ) ಸೋಮವಾರ ಪ್ರಕಟಿಸಿದೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷದ ಕೇಂದ್ರ ಸಮಿತಿ ನಿರ್ಧರಿಸಿದೆ ಎಂದು ಎಂಜಿಪಿ ಅಧ್ಯಕ್ಷ ದೀಪಕ್‌ ಧವಾಲಿಕರ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಂತರದಲ್ಲಿ ನಿರ್ಧರಿಸಲಾಗುವುದು ಎಂದೂ ಹೇಳಿದರು.

ADVERTISEMENT

‘ಇಲ್ಲಿ ಬಿಜೆಪಿ ವಿರುದ್ಧ ಅಲೆಯಿದ್ದು ಜನರು ಬದಲಾವಣೆ ಬಯಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ನಾವು ಸರ್ಕಾರ ರಚಿಸಲಿದ್ದೇವೆ. ನಾವು ಯಾವಾಗಲೂ ಬಿಜೆಪಿ ವಿರುದ್ಧವಾಗಿದ್ದೇವೆ. ನಾವು ಕಾಂಗ್ರೆಸ್‌, ಟಿಎಂಸಿ ಮತ್ತು ಆಮ್‌ ಆದ್ಮಿ ಪಕ್ಷದ ಜೊತೆ ಮಾತುಕತೆ ನಡೆಸಿದ್ದೇವೆ’ ಎಂದು ದೀಪಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.