ADVERTISEMENT

ಗೋವಾ: ಜೂನ್‌ 30ರವರೆಗೆ ಮಸೀದಿಗಳು ತೆರೆಯಲ್ಲ

ಏಜೆನ್ಸೀಸ್
Published 6 ಜೂನ್ 2020, 10:11 IST
Last Updated 6 ಜೂನ್ 2020, 10:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ: ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದಾಗಿ, ಮುಂಜಾಗ್ರತಾ ಕ್ರಮವಾಗಿ ಗೋವಾದಲ್ಲಿ ಜೂನ್‌ 30ರವರೆಗೆ ಮಸೀದಿಗಳನ್ನು ತೆರೆಯದೇ ಇರಲು ಅಖಿಲ ಗೋವಾ ಮುಸ್ಲಿಂ ಜಮಾತ್‌ ಒಕ್ಕೂಟವು ನಿರ್ಧರಿಸಿದೆ.

ಜೂನ್‌ 8ರಿಂದ ಲಾಕ್‌ಡೌನ್‌ ಸಡಿಲಿಕೆ ಆರಂಭವಾಗಲಿದ್ದು ‘ಅನ್‌ಲಾಕ್‌ 1’ರಲ್ಲಿ , ದೇವಸ್ಥಾನ, ಮಸೀದಿ, ಚರ್ಚ್‌ಗಳು ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಭಕ್ತರು ಭೇಟಿ ನೀಡಲು ಷರತ್ತುಬದ್ಧ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ‘ಸಮುದಾಯದಲ್ಲಿ ಸೋಂಕು ಹರಡುವ ಭೀತಿ ಇರುವುದರಿಂದ ಸಮುದಾಯದ ಜನರು ಹಾಗೂ ಸಮಾಜದ ಹಿತದೃಷ್ಟಿಯಿಂದಗೋವಾದಲ್ಲಿ ಮಸೀದಿಗಳನ್ನು ತೆರೆಯುವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಶೇಖ್‌ ಬಶೀರ್‌ ಅಹಮ್ಮದ್‌ ಶನಿವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT