ADVERTISEMENT

ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

ಪಿಟಿಐ
Published 8 ಡಿಸೆಂಬರ್ 2025, 15:57 IST
Last Updated 8 ಡಿಸೆಂಬರ್ 2025, 15:57 IST
‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ಕ್ಲಬ್‌
‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ಕ್ಲಬ್‌   

ಪಣಜಿ: ‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ಕ್ಲಬ್‌ನಲ್ಲಿ ನಡೆದ ಅನಾಹುತದ ಕುರಿತಂತೆ ಸಂಸ್ಥೆಯ ಮಾಲೀಕ ಸೌರಭ್‌ ಲೂತ್ರಾ ಬೇಸರ ವ್ಯಕ್ತಪಡಿಸಿದ್ದಾರೆ. 

‘ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಎಲ್ಲ ರೀತಿಯ ನೆರವು ಹಾಗೂ ಅಗತ್ಯ ಸಹಕಾರ ನೀಡಲು ಸಂಸ್ಥೆ ಬದ್ಧವಾಗಿದೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ದುರಂತದಲ್ಲಿ ಜೀವಗಳ ಪ್ರಾಣಹಾನಿಯಿಂದ ತೀವ್ರವಾದ ಆಘಾತಕ್ಕೆ ಒಳಗಾಗಿದ್ದೇನೆ. ಮೃತರ ಕುಟುಂಬದ ಜೊತೆಗೆ ಸಂಸ್ಥೆಯು ನಿಲ್ಲಲಿದೆ’ ಎಂದು ಭರವಸೆ ನೀಡಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಸೌರಭ್‌ ಲೂತ್ರಾ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

ಉದ್ಯೋಗಿ ಬಂಧನ:ಕ್ಲಬ್‌ನ ದೈನಂದಿನ ಮೇಲುಸ್ತುವಾರಿ ವಹಿಸಿದ್ದ ಭರತ್‌ ಕೊಹ್ಲಿಯನ್ನು ನವದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು ವಶಕ್ಕೆ ಪಡೆದು ಗೋವಾಕ್ಕೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.