ADVERTISEMENT

Goa Polls 2022: ಗೋವಾ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಂದ ಶಪಥಪತ್ರಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 19:31 IST
Last Updated 2 ಫೆಬ್ರುವರಿ 2022, 19:31 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಜೊತೆ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಗೋವಾದ ಪಣಜಿಯಲ್ಲಿ ಬುಧವಾದ ಶಪಥಪತ್ರ ಪ್ರದರ್ಶಿಸಿದರು –ಪಿಟಿಐ ಚಿತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಜೊತೆ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಗೋವಾದ ಪಣಜಿಯಲ್ಲಿ ಬುಧವಾದ ಶಪಥಪತ್ರ ಪ್ರದರ್ಶಿಸಿದರು –ಪಿಟಿಐ ಚಿತ್ರ   

ಪಣಜಿ (ಪಿಟಿಐ): ತಾವು ‘ಭ್ರಷ್ಟಾಚಾರ’ ಮತ್ತು ‘ಪಕ್ಷಾಂತರ’ದಲ್ಲಿ ಭಾಗಿ ಆಗುವುದಿಲ್ಲ ಎಂದು ಬರೆಯಲಾಗಿರುವ ಶಪಥಪತ್ರಕ್ಕೆಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸು
ತ್ತಿರುವಆಮ್‌ ಆದ್ಮಿ ಪಕ್ಷದ (ಎಎಪಿ) ಎಲ್ಲಾ 40 ಅಭ್ಯರ್ಥಿಗಳೂ ಬುಧವಾರ ಸಹಿ ಹಾಕಿದರು.

‘ಗೋವಾ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪಕ್ಷಾಂತರ. ಜನರು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೊದಲೇ ನಾವು ಆ ಪ್ರವೃತ್ತಿಯನ್ನು ಬೇರು ಸಮೇತ ಕಿತ್ತುಹಾಕಲಿ
ದ್ದೇವೆ’ ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಎಎಪಿಯ ಎಲ್ಲಾ ಅಭ್ಯರ್ಥಿಗಳೂ ಈ ವೇಳೆ ಶಪಥಪತ್ರದ
ಜೊತೆ ಹಾಜರಿದ್ದರು.

ತಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆ ಆದ ಬಳಿಕ ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ. ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಸೇರುವುದಿಲ್ಲ. ಈ ಶಪಥಪತ್ರದಲ್ಲಿರುವ ನಿಬಂಧನೆಗಳನ್ನು ಎಎಪಿ ಅಭ್ಯರ್ಥಿ ಮೀರಿದರೆ ಅದು ಕಾನೂನಾತ್ಮಕವಾಗಿ ನಂಬಿಕೆಯ ಉಲ್ಲಂಘನೆ ಆಗಲಿದೆ. ಈ ಶಪಥಪತ್ರಗಳ ಪ್ರತಿಗಳನ್ನು ಮತದಾರರಿಗೆ ಎಎಪಿ ಅಭ್ಯರ್ಥಿಗಳು ಹಂಚಲಿದ್ದಾರೆ.ಗೋವಾದಲ್ಲಿ ಪ್ರಾಮಾಣಿಕ ಸರ್ಕಾರವನ್ನು ನೀಡಲು ತಮ್ಮ ಪಕ್ಷ ಬದ್ಧವಾಗಿದೆ. ಅದಕ್ಕಾಗಿ ಪಕ್ಷಾಂತರವನ್ನು ದೂರ ಇರಿಸುವುದು ಅತಿ ಮುಖ್ಯ ಎಂದು ಕೇಜ್ರಿವಾಲ್ ಹೇಳಿದರು.ಕೇ‌ಜ್ರಿವಾಲ್‌ ಗೋವಾಕ್ಕೆ ನಾಲ್ಕು ದಿನಗಳ ಪ್ರವಾಸಕ್ಕಾಗಿ ಆಗಮಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.