ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ: ರನ್‌ವೇನಿಂದ ಜಾರಿದ ವಿಮಾನ

ಏಜೆನ್ಸೀಸ್
Published 14 ನವೆಂಬರ್ 2019, 12:48 IST
Last Updated 14 ನವೆಂಬರ್ 2019, 12:48 IST
ಗೋ ಏರ್‌ ವಿಮಾನ
ಗೋ ಏರ್‌ ವಿಮಾನ    

ಬೆಂಗಳೂರು:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗಪುರದಿಂದ ಬಂದಿದ್ದ ಗೋ ಏರ್‌ ವಿಮಾನ ರನ್‌ವೇಯಿಂದ ಜಾರಿದ್ದು ಭಾರಿಅನಾಹುತ ತಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನವೆಂಬರ್‌ 11 (ಸೋಮವಾರ)ರಂದು ಈ ಘಟನೆ ನಡೆದಿದೆ. ಹವಾಮಾನ ವೈಪರಿತ್ಯದ ಪರಿಣಾಮ ಗೋ ಏರ್‌ ವಿಮಾನ ರನ್‌ವೇನಿಂದ ಜಾರಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 180 ಜನ ಪ್ರಯಾಣಿಕರಿದ್ದರುಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

ಸೋಮವಾರ ಬೆಳಗ್ಗೆ 7.30ಕ್ಕೆಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಗೋ ಏರ್ ಏರ್‌ಲೈನ್ಸ್‌‌ ಸಂಸ್ಥೆಯಗೋ ಏರ್ ಎ-320 ವಿಮಾನ ಇಳಿಯುವಾಗ ರನ್‌ ವೇನಿಂದ ಜಾರಿ ಪಕ್ಕದ ಖಾಲಿ ಜಾಗಕ್ಕೆ ಹೋಗಿ ನಿಂತಿದೆ. ಯಾವುದೇ ಅನಾಹುತ ಸಂಭವಿಸಲಿಲ್ಲವಾದ್ದರಿಂದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಳಗೆ ಇಳಿಸಲಾಯಿತು ಎಂದುವಿಮಾನಯಾನ ಸಚಿವಾಲಯ ಹೇಳಿದೆ.

ADVERTISEMENT

ಬೆಳಗ್ಗೆ ಮಂಜು ಮುಸುಕಿದ್ದರಿಂದ ವಿಮಾನ ರನ್‌ ವೇನಿಂದ ಜಾರಲು ಕಾರಣ ಎಂದುಗೋ ಏರ್ ಏರ್‌ಲೈನ್ಸ್‌‌ ಸಂಸ್ಥೆ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೈಲಟ್‌ಗಳನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.