ADVERTISEMENT

ಬಸ್‌ನಲ್ಲಿ ಅರ್ಧ ಕೆ.ಜಿ. ಚಿನ್ನ, ವಿದೇಶಿ ಕರೆನ್ಸಿ ಸಾಗಣೆ: ಆರೋಪಿ ವಶಕ್ಕೆ

ಪಿಟಿಐ
Published 22 ಮಾರ್ಚ್ 2025, 13:14 IST
Last Updated 22 ಮಾರ್ಚ್ 2025, 13:14 IST
   

ಈರೋಡ್‌ (ತಮಿಳುನಾಡು): ಬಸ್‌ನಲ್ಲಿ ಅರ್ಧ ಕೆ.ಜಿ. ಚಿನ್ನ, ನೂರಕ್ಕೂ ಹೆಚ್ಚು ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಈರೋಡ್‌ ಸಮೀಪದ ಚಿತೋಡ್‌ನಲ್ಲಿ ಪೊಲೀಸರು ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಹೈದರಾಬಾದ್‌ನಿಂದ ಕೊಯಮತ್ತೂರಿಗೆ ಸಂಚರಿಸುತ್ತಿದ್ದ ಬಸ್‌, ಭವಾನಿ ಸಮೀಪದ ಲಕ್ಷ್ಮೀನಗರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಶೋಧ ನಡೆಸಿದ ಸಂದರ್ಭದಲ್ಲಿ, ಕೊಯಮತ್ತೂರಿನ ಸಿಂಗಾನಲ್ಲೂರ್‌ ನಿವಾಸಿ ಪುಗಳವಾಸನ್‌ ಎಂಬಾತ ಬ್ಯಾಗ್‌ನಲ್ಲಿ ಚಿನ್ನ, ವಿದೇಶಿ ಕರೆನ್ಸಿ ಇಟ್ಟುಕೊಂಡಿದ್ದು ಪತ್ತೆಯಾಗಿದೆ. ಆತ ಹಾಗೂ ಆತನ ಬಳಿ ಇದ್ದ ಮೂರು ಮೊಬೈಲ್‌ಗಳು, ಲ್ಯಾಪ್‌ಟಾಪ್‌ ಅನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತನಿಖೆ ಪ್ರಗತಿಯಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದೆಯೇ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.