ADVERTISEMENT

ಚೆನ್ನೈನಲ್ಲಿ ₹ 29 ಲಕ್ಷ ಮೌಲ್ಯದ ಚಿನ್ನ ವಶ

ಏಜೆನ್ಸೀಸ್
Published 22 ಫೆಬ್ರುವರಿ 2020, 14:42 IST
Last Updated 22 ಫೆಬ್ರುವರಿ 2020, 14:42 IST
ಚೆನ್ನೈನಲ್ಲಿ 681 ಗ್ರಾಂ ತೂಕದ ಚಿನ್ನ ವಶ
ಚೆನ್ನೈನಲ್ಲಿ 681 ಗ್ರಾಂ ತೂಕದ ಚಿನ್ನ ವಶ   

ಚೆನ್ನೈ (ತಮಿಳುನಾಡು): ಶ್ರೀಲಂಕಾ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹29.4ಲಕ್ಷ ಬೆಲೆಯ ಚಿನ್ನವನ್ನು ಇಲ್ಲಿನ ವಿಮಾನನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೊಲೊಂಬೋ ದಿಂದ ವಿಮಾನದಲ್ಲಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರ ಬಳಿ 681 ಗ್ರಾಂ ತೂಕದ ಎರಡು ಗಟ್ಟಿಗಳು ಇರುವುದು ಕಂಡು ಬಂತು. ಕೂಡಲೆ ಅವುಗಳನ್ನು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಕೂಡಲೆ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡುಇಬ್ಬರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT