ಮುಂಬೈ: ಗುಜರಾತಿನ ವಲಸಾಡ್– ಸೂರತ್ ನಡುವೆ ಸಂಚರಿಸುತ್ತಿದ್ದ ಗೂಡ್ಸ್ ರೈಲು ಶುಕ್ರವಾರ ಹಳಿತಪ್ಪಿದ್ದು, ಯಾವುದೇ ಹಾನಿಯುಂಟಾದ ಬಗ್ಗೆ ವರದಿಯಾಗಿಲ್ಲ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್‌ಗೆ ತೆರಳುತ್ತಿದ್ದ ರೈಲು ಡುಂಗರಿ ನಿಲ್ದಾಣ ಸಮೀಪ ಮಧ್ಯಾಹ್ನ 3 ಗಂಟೆ ವೇಳೆ ಹಳಿ ತಪ್ಪಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು.
ಪಶ್ಚಿಮ ರೈಲ್ವೆಯ ಕೇಂದ್ರ ಕಚೇರಿಯಾದ ಮುಂಬೈನಲ್ಲಿ ಶುಕ್ರವಾರ ರೈಲ್ವೆ ಸುರಕ್ಷತೆ– ಇತರೆ ವಿಚಾರಗಳ ಕುರಿತಂತೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.