ADVERTISEMENT

ಭಾರತ: ಜುಲೈನಲ್ಲಿ 95,680 ವಿಷಯಗಳನ್ನು ತೆಗೆದುಹಾಕಿದ ಗೂಗಲ್

ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್ ಸೇರಿದಂತೆ ಇತರ ವಿಷಯಗಳ ಕುರಿತು ದೂರು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 15:09 IST
Last Updated 31 ಆಗಸ್ಟ್ 2021, 15:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಭಾರತದಲ್ಲಿ ಜುಲೈ ತಿಂಗಳೊಂದರಲ್ಲೇ ಕೃತಿಸ್ವಾಮ್ಯ, ಅಶ್ಲೀಲ ಚಿತ್ರ, ನ್ಯಾಯಾಲಯದ ಆದೇಶ, ಟ್ರೇಡ್ ಮಾರ್ಕ್, ವಂಚನೆ ವಿಷಯಗಳು ಸೇರಿದಂತೆ ಒಟ್ಟು 95,680 ತುಣುಕುಗಳನ್ನು (ಕಂಟೆಂಟ್ ಪೀಸಸ್) ತೆಗೆದುಹಾಕಲಾಗಿದೆ’ ಎಂದು ಗೂಗಲ್ ಕಂಪನಿಯು ಮಂಗಳವಾರ ತಿಳಿಸಿದೆ.

‘ಬಳಕೆದಾರರಿಂದ 36,934 ದೂರುಗಳನ್ನು ಸ್ವೀಕರಿಸಲಾಗಿದ್ದು, ಒಟ್ಟು 95,680 ತುಣುಕುಗಳನ್ನು ಗೂಗಲ್‌ನಿಂದ ತೆಗೆದುಹಾಕಲಾಗಿದೆ. ಬಳಕೆದಾರರ ದೂರುಗಳ ಹೊರತಾಗಿಯೂ 5,76,892 ವಿಷಯಗಳ ತುಣುಕುಗಳನ್ನು ಜುಲೈನಲ್ಲಿ ತೆಗೆದುಹಾಕಲಾಗಿದೆ’ ಎಂದು ಗೂಗಲ್ ತನ್ನ ಮಾಸಿಕ ಪಾರದರ್ಶಕ ವರದಿಯಲ್ಲಿ ಮಾಹಿತಿ ನೀಡಿದೆ.

ಮೇ 26ರಂದು ಜಾರಿಗೆ ಬಂದ ಭಾರತದ ಐಟಿ ನಿಯಮಗಳ ಅನುಸಾರವಾಗಿ ಕಂಪನಿಯು ಈ ವಿಷಯಗಳನ್ನು ಬಹಿರಂಗಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.