
ನವದೆಹಲಿ: ಜಾರಿ ನಿರ್ದೇಶನಾಲಯದ ಕೇಡರ್ ದರ್ಜೆಯ 11 ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಜಂಟಿ ನಿರ್ದೇಶರನ್ನಾಗಿ ಪದೋನ್ನತಿ ನೀಡಿದೆ.
ಇಷ್ಟೊಂದು ಪ್ರಮಾಣದ ಕೇಡರ್ ಅಧಿಕಾರಿಗಳನ್ನು ಒಂದೇ ಬಾರಿಗೆ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡಿರುವುದು ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಒಂದೊ ಎರಡು ಅಧಿಕಾರಿಗಳಿಗೆ ಮಾತ್ರ ಬಡ್ತಿ ನೀಡಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ 11 ಮಂದಿಗೆ ಬಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.
ಜಂಟಿ ನಿರ್ದೇಶಕ ಹುದ್ದೆಯು ಜಾರಿ ನಿರ್ದೇಶನಾಲಯದಲ್ಲಿ ಉನ್ನತ ಆಡಳಿತಾತ್ಮಕ ಸ್ಥಾನವಾಗಿದ್ದು, ಹಣದ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆಗೆ ಸಂಬಂಧಿಸಿದ ತನಿಖೆಗಳನ್ನು ಮೇಲ್ವಿಚಾರಣೆ ಮಾಡಲು ಈ ಸ್ತರದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.
27 ವಲಯ ಅಧಿಕಾರಿಗಳು ಸೇರಿದಂತೆ ಜಾರಿ ನಿರ್ದೇಶನಾಲಯಕ್ಕೆ ದೇಶದಾದ್ಯಂತ 30 ಜಂಟಿ ನಿರ್ದೇಶಕರ ಹುದ್ದೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.