ADVERTISEMENT

ಅಶ್ಲೀಲ ವಿಷಯವಸ್ತು ತೆಗೆದುಹಾಕಲು ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಸೂಚನೆ

ಪಿಟಿಐ
Published 2 ಜನವರಿ 2026, 16:03 IST
Last Updated 2 ಜನವರಿ 2026, 16:03 IST
-
-   

ನವದೆಹಲಿ: ಎಲ್ಲ ಬಗೆಯ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯವಸ್ತುಗಳನ್ನು ವೇದಿಕೆಯಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಶುಕ್ರವಾರ ಸೂಚಿಸಿದೆ.

ವಿಶೇಷವಾಗಿ, ಕೃತಕಬುದ್ಧಿಮತ್ತೆ(ಎಐ) ಆಧಾರಿತ ಅ್ಯಪ್‌ ‘ಗ್ರೋಕ್’ನಿಂದ ರೂಪಿಸಿರುವ ಇಂತಹ ವಿಷಯವಸ್ತುಗಳನ್ನು ಕೂಡಲೇ ತೆಗೆದು ಹಾಕಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಕುರಿತು ಭಾರತದಲ್ಲಿರುವ ‘ಎಕ್ಸ್‌’ನ ಮುಖ್ಯ ಅನುಪಾಲನಾ ಅಧಿಕಾರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್‌ ನೀಡಿದೆ.

ADVERTISEMENT

‘ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಗಳ ಪಾಲನೆ ಮಾಡುವಲ್ಲಿ ವೇದಿಕೆ ವಿಫಲವಾಗಿದೆ. ನಿಯಮಗಳನ್ನು ಉಲ್ಲಂಘಿಸಿ ರೂಪಿಸಲಾದ ಇಲ್ಲವೇ ಈಗಾಗಲೇ ರೂಪಿಸಿ ಪ್ರಸಾರ ಮಾಡಲಾದ ಎಲ್ಲ ಅಶ್ಲೀಲ ವಿಷಯವಸ್ತುಗಳನ್ನು ಕೂಡಲೇ ವೇದಿಕೆಯಿಂದ ತೆಗೆದು ಹಾಕಬೇಕು ಅಥವಾ ಬಳಕೆದಾರರಿಗೆ ಅವುಗಳು ಸಿಗದಂತೆ ಕ್ರಮ ಕೈಗೊಳ್ಳಬೇಕು. ಇಂತಹ ಕ್ರಮ ಕೈಗೊಂಡಿದ್ದಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ನಾಶವಾಗದಂತೆ ನೋಡಿಕೊಳ್ಳಬೇಕು’ ಎಂದೂ ಸಚಿವಾಲಯ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.