ADVERTISEMENT

ಕೋವ್ಯಾಕ್ಸಿನ್‌: ಭಾರತ್‌ ಬಯೋಟೆಕ್‌ ಅಂಕ್ಲೇಶ್ವರ ಘಟಕಕ್ಕೆ ಕೇಂದ್ರದ ಅನುಮತಿ

ಪಿಟಿಐ
Published 10 ಆಗಸ್ಟ್ 2021, 9:11 IST
Last Updated 10 ಆಗಸ್ಟ್ 2021, 9:11 IST
ಮನ್‌ಸುಖ್‌ ಮಾಂಡವಿಯಾ
ಮನ್‌ಸುಖ್‌ ಮಾಂಡವಿಯಾ   

ನವದೆಹಲಿ: ‘ಕೋವಿಡ್ -19‘ ಲಸಿಕೆ ಕೋವ್ಯಾಕ್ಸಿನ್‌ ಉತ್ಪಾದಿಸಲು ಗುಜರಾತ್‌ನ ಅಂಕಲೇಶ್ವರದಲ್ಲಿರುವ ಭಾರತ್ ಬಯೋಟೆಕ್‌ನ ಉತ್ಪಾದನಾ ಘಟಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ‘ ಎಂದು ಕೇಂದ್ರ ಸಚಿವ ಮನ್‌ಸುಖ್‌ ಮಾಂಡವೀಯಾ ಮಂಗಳವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ, ‘ಸರ್ಕಾರದ ಈ ಕ್ರಮದಿಂದಾಗಿ ದೇಶದಲ್ಲಿ ಕೋವಿಡ್‌ ಲಸಿಕೆ ಲಭ್ಯತೆಯ ಪ್ರಮಾಣ ಹೆಚ್ಚಾಗಲಿದೆ‘ ಎಂದು ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಭಾರತ್‌ ಬಯೋಟೆಕ್‌ ಕಂಪನಿ ತನ್ನ ಅಂಕಲೇಶ್ವರ ಘಟಕದಿಂದ ಹೆಚ್ಚುವರಿಯಾಗಿ 20 ಕೋಟಿ ಡೋಸ್‌ಗಳಷ್ಟು ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುವುದಾಗಿ ಪ್ರಕಟಿಸಿತ್ತು.

ADVERTISEMENT

‘ಮುಂದಿನ ದಿನಗಳಲ್ಲಿ ತನ್ನ ಒಡೆತನದ ಚಿರೋನ್ ಬೆಹರಿಂಗ್‌ನಲ್ಲಿರುವ ಮತ್ತೊಂದು ಉತ್ಪಾದನಾ ಘಟಕವನ್ನು 20 ಕೋಟಿ ಡೋಸ್ ಕೋವ್ಯಾಕ್ಸಿನ್ ಉತ್ಪಾದಿಸಲು ಬಳಸಿಕೊಳ್ಳುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.