ADVERTISEMENT

ವಿದೇಶಗಳಿಗೆ ತೆರಳುವವರಿಗೆ ಬೂಸ್ಟರ್‌ ಡೋಸ್‌: ಕೇಂದ್ರ ಚಿಂತನೆ

ಶಿಕ್ಷಣ, ಉದ್ಯೋಗ ನಿಮಿತ್ತ ಪ್ರಯಾಣಿಸುವವರಿಗೆ ನೀಡಿಕೆ

ಪಿಟಿಐ
Published 26 ಮಾರ್ಚ್ 2022, 11:34 IST
Last Updated 26 ಮಾರ್ಚ್ 2022, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಶಿಕ್ಷಣ, ಉದ್ಯೋಗ ಹಾಗೂ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ವಿದೇಶಗಳಿಗೆ ತೆರಳುವ ಭಾರತೀಯರಿಗೆ ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಮುಂಜಾಗ್ರತೆ ದೃಷ್ಟಿಯಿಂದ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಬೇಕು ಎಂಬುದು ಸರ್ಕಾರದ ನಿಲುವಾಗಿದ್ದು, ಶೀಘ್ರವೇ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಮಾರ್ಚ್ 27ರಿಂದ ಮತ್ತೆ ಆರಂಭಗೊಳ್ಳಲಿದೆ. ಪ್ರಯಾಣಿಕರು ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್ ಹಾಕಿಸಿಕೊಂಡಿರಬೇಕು ಎಂಬುದು ಸೇರಿ ಹಲವಾರು ನಿರ್ಬಂಧಗಳನ್ನು ಕೆಲ ದೇಶಗಳು ಜಾರಿಗೊಳಿಸಿವೆ. ಹಾಗಾಗಿ ಮೂರನೇ ಡೋಸ್‌ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ವಿದೇಶಗಳಿಗೆ ತೆರಳುತ್ತಿರುವವರು ಬೂಸ್ಟರ್ ಡೋಸ್‌ ಪಡೆಯಲು ಇಚ್ಛಿಸಿದಲ್ಲಿ, ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಹಣ ಪಾವತಿ ಲಸಿಕೆ ಪಡೆಯುವಂತೆ ಅವರಿಗೆ ಸೂಚಿಸಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.

ಪ್ರಸ್ತುತ, ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ನೀಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.