ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಅಗ್ನಿಪಥ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಸಾಕಷ್ಟು ಯುವಕರ ಕನಸುಗಳನ್ನು ಕೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಕಿಡಿಕಾರಿದ್ದಾರೆ.
ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದರ ವಿರುದ್ಧ 'ಬೀದಿಯಿಂದ ಸಂಸತ್ತಿಗೆ' ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಯುವಕರಿಗೆ ರಾಹುಲ್ ಬೆಂಬಲ ಸೂಚಿಸಿದ್ದಾರೆ.
ಯುವಕರೊಂದಿಗೆ ಕುಳಿತ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿರುವ ಅವರು, 'ಸೇನೆ ಮತ್ತು ವಾಯುಪಡೆಗೆ ಖಾಯಂ ನೇಮಕಾತಿ ಪ್ರಕ್ರಿಯೆಯನ್ನು ತೆಗೆದುಹಾಕಿರುವ ಕೇಂದ್ರ ಸರ್ಕಾರ, 'ತಾತ್ಕಾಲಿಕ ನೇಮಕಾತಿ' ಕಲ್ಪಿಸುವ ಅಗ್ನಿವೀರ್ ಯೋಜನೆ ಜಾರಿಗೆ ತರುವ ಮೂಲಕ ಅಸಂಖ್ಯಾತ ಯುವಕರ ಕನಸುಗಳನ್ನು ನಾಶಮಾಡಿದೆ' ಎಂದು ಹಿಂದಿಯಲ್ಲಿ ಬರೆದಿದ್ದಾರೆ.
'ಯುವಕರು 'ಸತ್ಯಾಗ್ರಹದ ನಾಡು' ಬಿಹಾರದ ಚಂಪಾರಣ್ಯದಿಂದ ದೆಹಲಿಯವರೆಗೆ 1,100 ಕಿ.ಮೀವರೆಗೆ ಪಾದಯಾತ್ರೆ ಮಾಡುತ್ತಾ, ಹೋರಾಟ ನಡೆಸುತ್ತಿರುವುದನ್ನು ಮಾಧ್ಯಮಗಳು ಪ್ರಸಾರ ಮಾಡದಿರುವುದು ನೋವಿನ ಸಂಗತಿ' ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.