ADVERTISEMENT

112 ನ್ಯಾಯಮೂರ್ತಿಗಳ ನೇಮಕಕ್ಕೆ ಪ್ರಕ್ರಿಯೆ: ಮೇಘವಾಲ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 16:00 IST
Last Updated 7 ಡಿಸೆಂಬರ್ 2023, 16:00 IST
ಅರ್ಜುನ್ ರಾಮ್ ಮೇಘವಾಲ್
ಅರ್ಜುನ್ ರಾಮ್ ಮೇಘವಾಲ್   

ನವದೆಹಲಿ: ಹೈಕೋರ್ಟ್‌ಗಳಿಗೆ 112 ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಇದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ನ್ಯಾಯಾಂಗದ ಉನ್ನತ ಹುದ್ದೆಗಳಿಗೆ ನೇಮಕ ಮಾಡುವುದು ಸಮನ್ವಯದಿಂದ ನಡೆಯಬೇಕಿರುವ ಕೆಲಸ. ಇದರಲ್ಲಿ ನ್ಯಾಯಾಂಗ ಹಾಗೂ ಕಾರ್ಯಾಂಗದ ಭಾಗವಹಿಸುವಿಕೆ ಇರುತ್ತದೆ. ಸಾಂವಿಧಾನಿಕ ಹುದ್ದೆಗಳಲ್ಲಿ ಇರುವ ಬೇರೆ ಬೇರೆ ವ್ಯಕ್ತಿಗಳಿಂದ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಮೇಘವಾಲ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.

ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಒಟ್ಟು 1,114 ಹುದ್ದೆಗಳಿವೆ. ಈ ಪೈಕಿ 790 ಹುದ್ದೆಗಳು ಭರ್ತಿಯಾಗಿವೆ. 234 ಹುದ್ದೆಗಳು ಖಾಲಿ ಇವೆ ಎಂದು ಮೇಘವಾಲ್ ಹೇಳಿದರು.

ADVERTISEMENT

ಬೇರೆ ಬೇರೆ ಹೈಕೋರ್ಟ್‌ ಕೊಲಿಜಿಯಂಗಳು 292 ಹೆಸರುಗಳನ್ನು ಶಿಫಾರಸು ಮಾಡಿವೆ. ಈ ಪೈಕಿ 110 ಮಂದಿಯನ್ನು ನೇಮಕ ಮಾಡಿ ಆಗಿದೆ. 112 ಮಂದಿಯ ನೇಮಕದ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.