ನವದೆಹಲಿ: ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊ ಲ್ಯಾಂಡ್ (ಎನ್‌ಡಿಎಫ್‌ಬಿ)ನೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಆ ಭಾಗಕ್ಕೆ ಆರ್ಥಿಕ, ರಾಜಕೀಯ ಲಾಭ ತಂದುಕೊಡುವ ನಿರೀಕ್ಷೆ ಇದೆ.
ಬೋಡೊಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಚಳವಳಿ ನಡೆಸುತ್ತಿರುವ ಆಲ್ ಬೋಡೊ ವಿದ್ಯಾರ್ಥಿ ಸಂಘ (ಎಬಿಎಸ್‌ಯು) ಸಹ ಒಪ್ಪಂದಕ್ಕೆ ಸಹಿ ಹಾಕಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆದ ಈ ತ್ರಿಪಕ್ಷೀಯ ಒಪ್ಪಂದದ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಎನ್‌ಡಿಎಫ್‌ಬಿ, ಎಬಿಎಸ್‌ಯುನ ಹಿರಿಯ ನಾಯಕರು ಹಾಗೂ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಗರ್ಗ್ ಹಾಗೂ ಅಸ್ಸಾಂ ಮುಖ್ಯಕಾರ್ಯದರ್ಶಿ ಸಂಜಯ್‌ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.