ನವದೆಹಲಿ: ಹಿಂದುತ್ವದ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸಾವರ್ಕರ್ ಅವರ ಅದಮ್ಯ ಧೈರ್ಯ ಮತ್ತು ಹೋರಾಟದ ಸಾಹಸಗಾಥೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಸಾವರ್ಕರ್ ಅವರನ್ನು ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಬಣ್ಣಿಸಿರುವ ಮೋದಿ, ಬ್ರಿಟಿಷ್‌ರಿಂದ ಅತ್ಯಂತ ಕಠಿಣ ಚಿತ್ರಹಿಂಸೆಗೆ ಒಳಗಾದರೂ ಮಾತೃಭೂಮಿಯ ಮೇಲೆ ಅವರಿಗಿರುವ(ಸಾವರ್ಕರ್) ಸಮರ್ಪಣೆಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಸಾವರ್ಕರ್ ಅವರ ತ್ಯಾಗ ಮತ್ತು ಬದ್ಧತೆಯು ಭಾರತದ ಅಭಿವೃದ್ಧಿಯ ನಿರ್ಮಾಣಕ್ಕೆ ದಾರಿ ದೀಪವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಇನ್ನು, ಸಾವರ್ಕರ್ ಜನ್ಮದಿನದ ಶುಭಾಶಯ ತಿಳಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ಸಮಾಜವನ್ನು ಅಸ್ಪೃಶ್ಯತೆಯ ಪಿಡುಗಿನಿಂದ ಮುಕ್ತಗೊಳಿಸಿ ಅದನ್ನು ಏಕತೆ ಎಂಬ ಬಲವಾದ ದಾರದಲ್ಲಿ ಬಂಧಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ವೀರ ಸಾವರ್ಕರ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.