ADVERTISEMENT

ಉಸಿರುಗಟ್ಟಿ ಹೆಬ್ಬಕ ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:35 IST
Last Updated 27 ಫೆಬ್ರುವರಿ 2020, 19:35 IST
ಉಸಿರುಗಟ್ಟಿ ಮೃತಪಟ್ಟಿರುವ ಹೆಬ್ಬಕ
ಉಸಿರುಗಟ್ಟಿ ಮೃತಪಟ್ಟಿರುವ ಹೆಬ್ಬಕ   

ಅಹಮದಾಬಾದ್‌ :ಅಳಿವಿನಂಚಿನಲ್ಲಿರುವ ಹೆಬ್ಬಕವೊಂದು (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಉಸಿರುಗಟ್ಟಿ ಮೃತಪಟ್ಟ ಘಟನೆ ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ನಡೆದಿದೆ.

‘ಮೃತಪಟ್ಟ ಹೆಬ್ಬಕ ಹೆಣ್ಣಾಗಿದ್ದು,ಓತಿಕ್ಯಾತವೊಂದು ಇದರ ಗಂಟಲಲ್ಲಿ ಸಿಲುಕಿತ್ತು. ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಇದೀಗ ಕಛ್‌ನಲ್ಲಿ 4–5 ಹೆಬ್ಬಕಗಳಷ್ಟೇ ಉಳಿದಿವೆ. 2014ರಲ್ಲಿ ನಡೆದ ಸಮೀಕ್ಷೆ ವೇಳೆ ಜಿಲ್ಲೆಯಲ್ಲಿ 25 ಹೆಬ್ಬಕಗಳು ಪತ್ತೆಯಾಗಿದ್ದವು’ ಎಂದು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಕರ್ಣ್ ತಿಳಿಸಿದರು.

ದೇಶದಲ್ಲಿ ಅಳಿವಿನಂಚಿನಲ್ಲಿರುವ ಹೆಬ್ಬಕಗಳ ಸಂಖ್ಯೆ 150ರಷ್ಟಿರಬಹುದು. ರಾಜಸ್ಥಾನ ಮತ್ತು ಕಛ್‌ನಲ್ಲಿ ಹೆಚ್ಚಾಗಿ ಇವುಗಳು ಕಂಡುಬರುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.