ADVERTISEMENT

ದೇಗುಲ ಪ್ರವೇಶಕ್ಕೆ ಮಹಿಳೆಯರ ಯತ್ನ: ಶಬರಿಗಿರಿ ಮತ್ತೆ ಉದ್ವಿಗ್ನ

ಪಂಪಾದಲ್ಲಿ ಪ್ರತಿಭಟನೆ

ಪಿಟಿಐ
Published 23 ಡಿಸೆಂಬರ್ 2018, 19:53 IST
Last Updated 23 ಡಿಸೆಂಬರ್ 2018, 19:53 IST
ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಪ್ರತಿಭಟನಾಕಾರರು ತಡೆದರು –ಎಎಫ್‌ಪಿ ಚಿತ್ರ
ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಪ್ರತಿಭಟನಾಕಾರರು ತಡೆದರು –ಎಎಫ್‌ಪಿ ಚಿತ್ರ   

ತಿರುವನಂತಪುರ: ಕೆಲವು ತಿಂಗಳಿಂದ ಯುದ್ಧಭೂಮಿಯಂತಾಗಿದ್ದ ಶಬರಿಮಲೆ ಶಾಂತವಾಯಿತು ಎನ್ನುವಷ್ಟರಲ್ಲಿ ಮತ್ತೆ ಉದ್ವಿಗ್ನಗೊಂಡಿದೆ.

ಭಾನುವಾರ ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ 11 ಮಹಿಳೆಯರ ಗುಂಪೊಂದನ್ನು ಪ್ರತಿಭಟನಾಕಾರರು ತಡೆದ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ.

ಅರಣ್ಯದ ಕಾಲುದಾರಿಯಲ್ಲಿ ದೇವಸ್ಥಾನದತ್ತ ತೆರಳಲು ಯತ್ನಿಸಿದ ಮಹಿಳೆಯರನ್ನೂ ಪ್ರತಿಭಟನಾಕಾರರು ಅಡ್ಡಗಟ್ಟಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರೂ ಪರಿಸ್ಥಿತಿ ತಿಳಿಯಾಗಲಿಲ್ಲ.

ADVERTISEMENT

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮಹಿಳೆಯರು ಸಮೀಪದಲ್ಲಿದ್ದ ಪೊಲೀಸ್‌ ಸಿಬ್ಬಂದಿಯ ಕೊಠಡಿಯೊಳಗೆ ಓಡಿ ಹೋಗಿ ರಕ್ಷಣೆ ಪಡೆದರು.

‘ನಾವು ಯಾವುದೇ ಸಂಘಟನೆಗೆ ಸೇರಿದ ಕಾರ್ಯಕರ್ತರಲ್ಲ. ಅಯ್ಯಪ್ಪನ ಭಕ್ತರಾದ ನಾವು ಇರುಮುಡಿ ಹೊತ್ತು ಇಲ್ಲಿಗೆ ಬಂದಿದ್ದೇವೆ’ ಎಂದು ತಮಿಳುನಾಡಿನಿಂದ ಬಂದಿದ್ದ ಮಹಿಳೆಯರ ಗುಂಪಿನ ನಾಯಕಿ ವಾಸಂತಿ ತಿಳಿಸಿದರು.

ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ರಾಜ್ಯದಾದ್ಯಂತ ನಾಮಜಪ ಮಾಡುವ ಮೂಲಕ ಮತ್ತೆ ಪ್ರತಿಭಟನೆ ಆರಂಭಿಸಿದ ಕಾರಣ ಕೇರಳದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಅಧಿಕೃತ ನಿವಾಸದ ಎದುರು ಕೆಲವು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.