ADVERTISEMENT

ಜಿಸ್ಯಾಟ್–31 ಸಂಪರ್ಕ ಉಪಗ್ರಹ ಉಡಾವಣೆ ಯಶಸ್ವಿ

ಪಿಟಿಐ
Published 6 ಫೆಬ್ರುವರಿ 2019, 18:39 IST
Last Updated 6 ಫೆಬ್ರುವರಿ 2019, 18:39 IST
   

ಬೆಂಗಳೂರು: ಭಾರತದ ಅತ್ಯಾಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್–31 ಅನ್ನು ಫ್ರೆಂಚ್ ಗಯಾನದಿಂದ ಬುಧವಾರ ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ದಕ್ಷಿಣ ಅಮೆರಿಕದ ಕೈರೊದ ಉಡಾವಣಾ ಕೇಂದ್ರದಿಂದ ಉಡ್ಡಯನ ಮಾಡಲಾದಏರಿಯಾನ್–5 ರಾಕೆಟ್‌ ಮೂಲಕ ಉಪಹಗ್ರವು ನಿಗದಿತ ಕಕ್ಷೆಗೆ ಸೇರಿತು.

ಈ ಉಪಗ್ರಹವು ತಡೆರಹಿತ ಡಿಟಿಎಚ್ ಸೇವೆಗೆ ಹಾಗೂ ಎಟಿಎಂ ಸಂಪರ್ಕ ಮೇಲ್ದರ್ಜೆಗೆ ಏರಿಸಲು ನೆರವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ನಿರ್ಮಿಸಿರುವ 40ನೇ ಸಂಪರ್ಕ ಉಪಗ್ರಹ ಇದಾಗಿದೆ.

ಸದ್ಯದಲ್ಲೇ ನಿವೃತ್ತಿಯಾಗಲಿರುವ ಕೆಲವು ಸಂಪರ್ಕ ಉಪಗ್ರಹಗಳ ಸ್ಥಾನವನ್ನುಕೆಯು–ಬ್ಯಾಂಡ್ ಹೊಂದಿರುವ ಈ ಶಕ್ತಿಶಾಲಿ ಸಂಪರ್ಕ ಉಪಗ್ರಹ ತುಂಬಲಿದೆ.

ADVERTISEMENT

ಉಪಗ್ರಹ ಯಶಸ್ವಿ ಉಡಾವಣೆಗೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್.ಪಾಂಡಿಯನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.