ADVERTISEMENT

ತೆರಿಗೆ ವಂಚನೆಯ ಜಾಲ ಪತ್ತೆ

ಪಿಟಿಐ
Published 7 ಡಿಸೆಂಬರ್ 2020, 12:28 IST
Last Updated 7 ಡಿಸೆಂಬರ್ 2020, 12:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನಾಗಪುರ: ಜಿಎಸ್‌ಟಿ ಗುಪ್ತದಳ ಮಹಾ ನಿರ್ದೇಶಕರ (ಡಿಜಿಜಿಐ) ಕಚೇರಿ ಅಧಿಕಾರಿಗಳು ಖಾಸಗಿ ಸಂಸ್ಥೆಯ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿದ್ದು, ತೆರಿಗೆ ವಂಚನೆಗೆ ಕಾರಣವಾದ ₹ 290.70 ಕೋಟಿ ವಹಿವಾಟು ಪತ್ತೆ ಹಚ್ಚಿದ್ದಾರೆ. ದಾಳಿ ಸಂದರ್ಭದಲ್ಲಿ ₹ 25.22 ಕೋಟಿಗೆ ಸಂಬಂಧಿಸಿದ ನಕಲಿ ತೆರಿಗೆ ರಸೀದಿಗಳು (ಐಟಿಸಿ) ಕೂಡಾ ಪತ್ತೆಯಾಗಿವೆ.

ಡಿಜಿಸಿಐ ಪತ್ರಿಕಾ ಹೇಳಿಕೆ ಪ್ರಕಾರ, ಮುಂಬೈ ಮೂಲದ ಎಂ ಅಂಡ್ ಎಂ ಅಡ್ವೈಸರ್ಸ್‌ ಮತ್ತು ಕನ್ಸಲ್ಟೆನ್ಸಿ ಕಂಪನಿಯ ಕಚೇರಿ ಮೇಲೆ ದಾಳಿ ನಡೆಯಿತು. ಅಸ್ತಿತ್ವದಲ್ಲಿಯೇ ಇಲ್ಲದ ಜಾಹೀರಾತು ಸಂಸ್ಥೆ ಪತ್ತೆ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.

ದಾಳಿ ಸಂದರ್ಭದಲ್ಲಿ ಕಂಪನಿಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಾಹಿನಿಗಳಿಗಾಗಿ ಹಲವು ಚಿತ್ರ ನಿರ್ಮಾಣ ಸಂಸ್ಥೆಗಳ ನಿರ್ಮಾಣಗಳ ಪ್ರಸಾರದ ಹಕ್ಕುಗಳನ್ನು ಹೊಂದಿರುವುದು ಪತ್ತೆಯಾಯಿತು ಎಂದು ಹೇಳಿಕೆ ತಿಳಿಸಿದೆ.

ADVERTISEMENT

ದೊಡ್ಡ ಸಂಸ್ಥೆಗಳಿಂದ ಚಲನಚಿತ್ರಗಳ ಹಕ್ಕುಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸುತ್ತಿದ್ದರು. ಹೀಗೆ, ₹290.70 ಕೋಟಿ ವಹಿವಾಟಿಗೆ ಸಂಬಂಧಿಸಿದಂತೆ ತೆರಿಗೆ ವಂಚನೆಯಾಗಿದೆ ಎಂದು ಹೇಳಿಕೆಯು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.