ADVERTISEMENT

ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಮಾರ್ಗಸೂಚಿ

ಕೋವಿಡ್‌–19 ರೋಗಿಗಳ ಚಿಕಿತ್ಸೆ ನಿರತವರು ಪಾಲಿಸಲು ಸಿಪಿಸಿಬಿ ಸೂಚನೆ

ಪಿಟಿಐ
Published 21 ಏಪ್ರಿಲ್ 2020, 19:12 IST
Last Updated 21 ಏಪ್ರಿಲ್ 2020, 19:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಕೋವಿಡ್‌–19 ಶಂಕಿತರ ಪರೀಕ್ಷೆ ಹಾಗೂ ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಕುರಿತಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾರ್ಗಸೂಚಿಗಳನ್ನು ನೀಡಿದೆ.

ಶಂಕಿತರು ಹಾಗೂ ರೋಗಿಗಳನ್ನು ದಾಖಲಿಸಿರುವ ಐಸೋಲೇಶನ್‌ ವಾರ್ಡ್‌, ಕ್ವಾರಂಟೈನ್‌ ಕೇಂದ್ರಗಳು, ಮಾದರಿ ಸಂಗ್ರಹ ಕೇಂದ್ರಗಳು, ಪ್ರಯೋಗಾಲಯಗಳು, ನಗರಸ್ಥಳೀಯ ಸಂಸ್ಥೆಗಳು ಸ್ಥಾಪಿಸಿರುವ ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಡಳಿ ಮಂಗಳವಾರ ಸೂಚಿಸಿದೆ.

ಮಾರ್ಗಸೂಚಿಗಳು ಹೀಗಿವೆ...

ADVERTISEMENT

* ತ್ಯಾಜ್ಯ ಸಂಗ್ರಹಕ್ಕೆ ಎರಡು ಪದರಿರುವ ಬ್ಯಾಗ್‌ಗಳನ್ನು ಬಳಸಬೇಕು

* ಕೋವಿಡ್‌–19 ರೋಗಿ ಚಿಕಿತ್ಸೆಯ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಬುಟ್ಟಿ ಬಳಸಬೇಕು.

* ಈ ಬುಟ್ಟಿ ಮೇಲೆ ‘ಕೋವಿಡ್‌–19’ ಎಂದು ಬರೆದು, ವಿಶಿಷ್ಟ ಬಣ್ಣದಿಂದ ಗುರುತು ಮಾಡಬೇಕು

* ತ್ಯಾಜ್ಯ ಸಂಗ್ರಹಕ್ಕೆ ಬಳಸುವ ಬುಟ್ಟಿ, ಟ್ರಾಲಿಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣ ಬಳಸಿ ಸೋಂಕುನಾಶಕ ಪ್ರಕ್ರಿಯೆಗೆ ಒಳಪಡಿಸಬೇಕು

* ವಿಲೇವಾರಿಗಾಗಿ ಈ ಬುಟ್ಟಿಗಳನ್ನು ಹಸ್ತಾಂತರಿಸುವ ಮುನ್ನ ತ್ಯಾಜ್ಯದ ಸಮರ್ಪಕ ವಿಂಗಡಣೆ ಮಾಡಿರಬೇಕು

* ಕೋವಿಡ್‌–19 ರೋಗಿಗಳನ್ನು ದಾಖಲು ಮಾಡಿರುವ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯತೇಕ ದಾಖಲಾತಿ ನಿರ್ವಹಣೆ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.