ADVERTISEMENT

ಗುಜರಾತ್‌: ಪಾಕ್‌ನ 9 ಮೀನುಗಾರರ ದೋಣಿ ವಶ

ಪಿಟಿಐ
Published 10 ಫೆಬ್ರುವರಿ 2022, 12:37 IST
Last Updated 10 ಫೆಬ್ರುವರಿ 2022, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ಇಲ್ಲಿನ ಕಚ್‌ ಜಿಲ್ಲೆ ಸಮೀಪದ ಭಾರತ–ಪಾಕ್‌ ಸಮುದ್ರ ಗಡಿ ಭಾಗದ ಪ್ರದೇಶದಲ್ಲಿ ಪಾಕಿಸ್ತಾನದ ಮೀನುಗಾರರಿಗೆ ಸೇರಿದ ಒಂಬತ್ತು ದೋಣಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಗುರುವಾರ ವಶಕ್ಕೆ ಪಡೆದಿದೆ.

ಯುಎವಿ(ಆನ್‌ಮ್ಯಾನ್‌ ಏರಿಯಲ್ಡ್‌ ವೇಕಲ್) ಕ್ಯಾಮೆರಾದಲ್ಲಿ ದೋಣಿಗಳು ಪತ್ತೆಯಾದಕ್ಷಣವೇ ಗಸ್ತಿನಲ್ಲಿದ್ದ ಬಿಎಸ್‌ಎಫ್‌ನ ಯೋಧರು ಸ್ಥಳ ತಲುಪಿ, ಪಾಕ್‌ ಮೀನುಗಾರರ ದೋಣಿಗಳನ್ನು ವಶ ಪಡಿಸಿಕೊಂಡರು. ಆದರೆ ಅದರಲ್ಲಿ ಪಾಕಿಸ್ತಾನದ ಮೀನುಗಾರರು ಇರಲಿಲ್ಲ. ಬಿಎಸ್‌ಎಫ್‌ ಇರುವಿಕೆ ತಿಳಿದ ಅವರು ಸ್ಥಳದಿಂದಪರಾರಿಯಾಗಿರಬಹುದು ಎಂದು ಬಿಎಸ್‌ಎಫ್‌ ಅಧಿಕಾರಿ ಜಿ.ಎಸ್‌.ಮಲ್ಲಿಕ್‌ ತಿಳಿಸಿದರು.

ಕಚ್‌ ಸಮೀಪವಿರುವ ಈ ಪ್ರದೇಶಕ್ಕೆ ಭಾರತೀಯ ಮೀನುಗಾರರಿಗೂ ನಿರ್ಬಂಧವಿದೆ. ಇಲ್ಲಿಗೆ ಯಾರುಪ್ರವೇಶಿಸದಂತೆ ಗಸ್ತು ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.