ADVERTISEMENT

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಒಬಿಸಿ ನಾಯಕ ಅಲ್ಪೇಶ್‌ ಠಾಕೂರ್‌ಗೆ ಸೋಲು

ಬಿಜೆಪಿಗೆ ಹಿನ್ನಡೆ,  3 ಸೀಟು ಗೆದ್ದ ಕಾಂಗ್ರೆಸ್

ಪಿಟಿಐ
Published 24 ಅಕ್ಟೋಬರ್ 2019, 13:51 IST
Last Updated 24 ಅಕ್ಟೋಬರ್ 2019, 13:51 IST
ಅಲ್ಪೇಶ್ ಠಾಕೂರ್
ಅಲ್ಪೇಶ್ ಠಾಕೂರ್   

ಅಹಮದಾಬಾದ್: ಗುಜರಾತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರುಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ವಿಜಯಗಳಿಸಿದೆ. 6 ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆದ ಉಪಚುನಾವಣೆಯಲ್ಲಿ ನಾಲ್ಕು ಚುನಾವಣಾಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಇನ್ನುಳಿದ ಎರಡುಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಮತ ಎಣಿಕೆ ನಡೆಯುತ್ತಿರುವ ಕ್ಷೇತ್ರಗಳಲ್ಲಿಬಿಜೆಪಿ ಮುನ್ನಡೆ ಸಾಧಿಸಿದೆ.

ಬಯಾದ್ ಚುನಾವಣಾ ಕ್ಷೇತ್ರದಲ್ಲಿ ಕಾಂಂಗ್ರೆಸ್ ಅಭ್ಯರ್ಥಿ ಜಶು ಪಟೇಲ್ ಅವರು ಬಿಜೆಪಿ ಅಭ್ಯರ್ಥಿ ಧವಳ್‌ಸಿನ್ಹ್ ಝಾಲಾ ಅವರನ್ನು700 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ADVERTISEMENT

ಮತ ಎಣಿಕೆ ಮುಗಿಯುವ ಮುನ್ನವೇ ಝಾಲಾ ಅವರು ಸೋಲು ಒಪ್ಪಿಕೊಂಡು ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದರು.

ಬನಸ್ಕಂತ್‌ನ ಥರಾಡ್ ಚುನಾವಣಾ ಕ್ಷೇತ್ರದಲ್ಲಿಕಾಂಗ್ರೆಸ್ ಅಭ್ಯರ್ಥಿ ಗುಲಾಬ್ ಸಿಂಗ್ ರಜಪೂತ್ ಅವರು ಬಿಜೆಪಿಯ ಜೀವರಾಜ್ ಪಟೇಲ್ ಅವರನ್ನು 6,400 ಮತಗಳಿಂದ ಪರಾಭವಗೊಳಿಸಿದ್ದಾರೆ.

ಮೆಹಸನದ ಖೆರಾಲು ಕ್ಷೇತ್ರದಲ್ಲಿ ಬಿಜೆಪಿಯ ಅಜ್ಮಲ್‌ಜೀ ಅವರು ಕಾಂಗ್ರೆಸ್‌ನ ಬಾಬೂಜಿ ಠಾಕೂರ್ ಅವರನ್ನು 29,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರಾಧಾನ್‌ಪುರ್‌ನಲ್ಲಿ ಒಬಿಸಿ ನೇತಾರ ಹಾಗೂ ಬಿಜೆಪಿ ನಾಯಕ ಅಲ್ಪೇಶ್ ಠಾಕೂರ್ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನ ರಘುಬಾಯ್ ದೇಸಾಯಿ, ಠಾಕೂರ್ ಅವರನ್ನು 3,500 ಮತಗಳಿಂದ ಪರಾಭವಗೊಳಿಸಿದ್ದಾರೆ.

ಪಟೇಲ್ ಸಮುದಾಯದವರಿಗೆ ಕೋಟಾನೀಡುವಂತೆ ಒತ್ತಾಯಿಸಿ ನಡೆದ ಚಳವಳಿಯಲ್ಲಿ ಒಬಿಸಿ ನಾಯಕರಾಗಿ ಹೊರಹೊಮ್ಮಿದ್ದ ಅಲ್ಪೇಶ್, 2017ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ರಾಧಾನ್‌ಪುರ್‍‌ನಲ್ಲಿ ಗೆದ್ದಿದ್ದರು. ಆಮೇಲೆ ಕಾಂಗ್ರೆಸ್ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಝಾಲಾ ಅವರ ಆಪ್ತರಾಗಿದ್ದಾರೆ ಅಲ್ಪೇಶ್.

ಲುನಾವಡಾ ಮತ್ತು ಅಮರೈವಡಿ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.